ರಾಜ್ಯ ಸರಕಾರದಿಂದ ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಕೆ ನಿರ್ಧಾರ: ಇಂದು ಸಂಜೆ ಅಧಿಕೃತ ಆದೇಶ ಸಾಧ್ಯತೆ

ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಸಂಚಾರಿ ನಿಯಮ ಉಲ್ಲಂಘನೆ ದುಬಾರಿ ದಂಡ ಇಳಿಕೆ ಮಾಡುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದ್ದು, ಇಂದು ಸಂಜೆ ವೇಳೆಗೆ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆ.

ಗುಜರಾತ್ ಸರ್ಕಾರ ಈಗಾಗಲೇ ದಂಡ ಇಳಿಸಿದ್ದು, ರಾಜ್ಯ ಸರ್ಕಾರ ದಂಡದ ಮೊತ್ತವನ್ನು ಇಳಿಸಲು ಮುಂದಾಗಿದ್ದು,ಈಗಾಗಲೇ ಪರಿಷ್ಕೃತ ದರ ಕಳುಹಿಸಿದ್ದು, ಸಂಜೆ ವೇಳಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

ಸಂಚಾರಿ ನಿಯಮ ಉಲ್ಲಂಘನೆಗೆ ಯಾವುದು ಎಷ್ಟು ಇಳಿಕೆ ?

ನಿಯಮ ಉಲ್ಲಂಘನೆ ಹೊಸ ದಂಡ 500 ರೂ. ಇದ್ದು, ಪ್ರಸ್ತಾವಿತ ದಂಡ 500 ರೂ. ಮುಂದುವರೆಯಲಿದೆ.

ನೊಂದಣಿ ಇಲ್ಲದಿದ್ದರೆ ಹೊಸ ದಂಡ 5 ಸಾವಿರ ರೂ. ಇದ್ದು, ಪ್ರಸ್ತಾವಿತ ದಂಡ 5 ಸಾವಿರ ರೂ. ಮುಂದುವರೆಯಲಿದೆ.

ಹೆಲ್ಮೆಟ್ ರಹಿತ ಚಾಲನೆಗೆ 1 ಸಾವಿರ ರೂ.ನಿಂದ 500 ರೂ.ಗೆ ಇಳಿಕೆ

ಡಿ.ಎಲ್. ಇಲ್ಲದಿದ್ದರೆ 5 ಸಾವಿರ ರೂ. ನಿಂದ 1 ಸಾವಿರ ರೂ.ಗೆ ಇಳಿಕೆ

ಅಪ್ರಾಪ್ತರ ಚಾಲನೆಗೆ ಹೊಸ ದಂಡ 10 ಸಾವರಿ ರೂ. ಇದ್ದು, ಪ್ರಸ್ತಾವಿತ ದಂಡ 10 ಸಾವಿರ ರೂ. ಮುಂದುವರೆಯಲಿದೆ.

ಕುಡಿದು ವಾಹನ ಚಾಲನೆಗೆ 10 ಸಾವಿರ ರೂ. ದಂಡ ಮುಂದುವರಿಕೆ

ಸೀಟ್ ಬೆಲ್ಟ್ 1000 ರೂ.ನಿಂದ 500 ರೂ. ಗೆ ಇಳಿಕೆ

ಓವರ್ ಸ್ಪೀಡ್ 2 ಸಾವಿರ ರೂ.ನಿಂದ 1 ಸಾವಿರ ರೂ.ಗೆ ಇಳಿಕೆ

ಓವರ್ ಲೋಡ್ 20 ಸಾವಿರ ರೂ. ನಿಂದ 10 ಸಾವಿರ ರೂ. ಇಳಿಕೆ ಆಗಲಿದೆ ಎನ್ನಲಾಗಿದೆ.