ರಸ್ತೆ ಸುರಕ್ಷತೆಯ ಬೇಕು-ಬೇಡಗಳ ಅರಿವು ಕುರಿತು ಮೈಸೂರಿನಲ್ಲಿ ‘ಟ್ರಾಫಿಕ್ ಪಾಠಶಾಲಾ’ ಅಭಿಯಾನ…

Promotion

ಮೈಸೂರು,ಜು,18,2019(www.justkannada.in):  ಎಚ್‌ಡಿಎಫ್‌ಸಿ ಬ್ಯಾಂಕ್, ಮೈಸೂರು ಪೊಲೀಸರ ಸಹಯೋಗದಲ್ಲಿ ಇಂದು ‘ಟ್ರಾಫಿಕ್ ಪಾಠಶಾಲಾ’ ಅಭಿಯಾನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

ಮೈಸೂರಿನ ಸಿದ್ದಾರ್ಥ ಲೇ ಔಟ್ ನಲ್ಲಿರುವ ಹೆಚ್.ಡಿ.ಎಫ್.ಸಿ ಕಛೇರಿಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನ  ಮೈಸೂರು ನಗರದ ಎಸಿಪಿ. ಜಿ.ಮೋಹನ್‌ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ಬೇಕು-ಬೇಡಗಳ ಕುರಿತು ಅರಿವು ಮೂಡಿಸಲಾಯಿತು.

ನಗರದ ಪ್ರಮುಖ ವೃತ್ತಗಳಲ್ಲಿ ಅಂದರೇ ರಾಮಸ್ವಾಮಿ ವೃತ್ತ, ಕೆ.ಆರ್.ವೃತ್ತ, ಮೆಟ್ರೋಪೋಲ್ ವೃತ್ತ, ಟೆರೆಸಿಯನ್ ವೃತ್ತ ,  ವಿಜಯಾ ಬ್ಯಾಂಕ್ ವೃತ್ತ,  ಅಪೋಲೋ ಆಸ್ಪತ್ರೆ ವೃತ್ತ, ಪಾಠಶಾಲಾ ವೃತ್ತ, ಐಶ್ವರ್ಯ ಪೆಟ್ರೋಲ್ ಬಂಕ್, ಪಡುವಾರಳ್ಳಿ ವೃತ್ತ ಮತ್ತು ಬೋಗಾದಿ ರಿಂಗ್ ರಸ್ತೆಯ ಜಂಕ್ಷನ್‌ಗಳಲ್ಲಿ ಈ ಅಭಿಯಾನ ನಡೆಯಲಿದೆ.

Key words: ‘Traffic – patashala- Campaign – Mysore.