ಮೈಸೂರಿನ ಪ್ರವಾಸಿ ತಾಣಗಳ ಬಂದ್ ಮಾಡುವ ವಿಚಾರ: ನಾಳೆ ಅಂತಿಮ ನಿರ್ಧಾರ- ಸಚಿವ ಎಸ್.ಟಿ ಸೋಮಶೇಖರ್.

Promotion

ಮೈಸೂರು,ಆಗಸ್ಟ್,6,2021(www.justkannada.in): ಮೈಸೂರಿನ ಪ್ರವಾಸಿ ತಾಣಗಳು ತೆರದಿರಬೇಕೋ ಅಥವಾ ಮುಚ್ಚಬೇಕೋ ಎಂಬ ವಿಚಾರದ ಬಗ್ಗೆ ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಈ ಸಂಬಂಧ ನಾಳೆ ಮಧ್ಯಾಹ್ನದೊಳಗೆ ಸಂಪೂರ್ಣ ವರದಿ ಕೊಡುವಂತೆ ಜಿಲ್ಲಾಢಳಿತವನ್ನ ಕೇಳಿದ್ದೇನೆ. ನಾಳೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ಜನರಿಗು ತೊಂದರೆ ಆಗದಂತೆ ವ್ಯಾಪಾರಸ್ಥರಿಗೂ ಅನಾನುಕೂಲ ಆಗದಂತೆ ತೀರ್ಮಾನ ಮಾಡಲಾಗುತ್ತದೆ ಎಂದರು.

ಲಾಕ್‌ ಡೌನ್‌ನಿಂದ ಸಾಕಷ್ಟು ನಷ್ಟ ಆಗಿವೆ. ಹೀಗಾಗಿ ಏಕಾಏಕಿ ಸಂಪೂರ್ಣ ಮುಚ್ಚುವುದು ಸಹ ಕಷ್ಟ‌. ನಾಳೆ ಇದೆಲ್ಲವನ್ನು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: Tourist places – Mysore-bandh- Final decision- tomorrow- Minister- ST Somashekhar