ಜಿಲ್ಲಾಧಿಕಾರಿಗಳ ಜತೆ ಸಿಎಂ ಬಿಎಸ್ ವೈ ವಿಡಿಯೋ ಕಾನ್ಫರೆನ್ಸ್: ಬಳ್ಳಾರಿ ಚಿಕ್ಕಮಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸಿ ತಾಣ ಮುಚ್ಚುವಂತೆ ಸೂಚನೆ

Promotion

ಬೆಂಗಳೂರು,ಮಾ,16,2020(www.justkannada.in): ಕೊರೋನಾ ವೈರಸ್ ಭೀತಿ ಹಿನ್ನೆಲೆ ಬಳ್ಳಾರಿ ಚಿಕ್ಕಮಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸಿ ತಾಣ ಮುಚ್ಚುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ರಾಜ್ಯದ ಜಿಲ್ಲಾಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಿ, ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿಎಸ್ ವೈ, ಡಿಸಿ ಜಿಲ್ಲಾಪಂಚಾಯತ್ ಸಿಇಒ ಎಸ್ ಪಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚಿಸಿದ್ದೇನೆ. ಕೊರೋನಾ ಹರಡುವ ಭೀತಿ ಕುರಿತು ವರದಿ ಪಡೆದಿದ್ದೇನೆ.  ಕೊರೋನಾ ಭೀತಿ ಹಿನ್ನೆಲೆ, ಬಳ್ಳಾರಿ,ಕೊಪ್ಪಳ,  ಚಿಕ್ಕಮಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸಿ ತಾಣ ಮುಚ್ಚುವಂತೆ ಸೂಚಿಸಿದ್ದೇನೆ ಎಂದರು.

ಹಾಗೆಯೇ ಹೋಮ್ ಸ್ಟೆಗಳಲ್ಲಿ ಗಮನ ಹರಿಸುವಂತೆ ಸೂಚಿಸಿದ್ದೇನೆ. ರಾಜ್ಯದ ಗಡುಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ, ಏರ್ ಪೋರ್ಟ್ , ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಿಎಂ ಬಿಎಸ್ ವೈ ಹೇಳಿದರು.

Key words: Tourist places – close-CM BS Yeddyurappa- video conference -DC