ದೇಶದಲ್ಲಿ ಒಂದೇ ದಿನ 48,916 ಮಂದಿಗೆ ಕೊರೋನಾ ಸೋಂಕು ಪತ್ತೆ…

Promotion

ನವದೆಹಲಿ,ಜು,25,2020(www.justkannada.in):  ದೇಶದಲ್ಲಿ ಕೊರೋನಾ  ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಒಂದೇ ದಿನದಲ್ಲಿ 48,916 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ.jk-logo-justkannada-logo

ಈ ಕುರಿತು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 48,916 ಮಂದಿ ಕೊರೋನಾ ಸೋಂಕಿಗೆ ತುತ್ತಾದರೇ 757 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,36,861ಕ್ಕೆ ಏರಿಕೆಯಾಗಿದೆ.total-48916-people-coronavirus-single-day

ಇನ್ನು ಈವರೆಗೇ ಮಹಾಮಾರಿ ಕೊರೋನಾಗೆ ಒಟ್ಟು 31,358  ಮಂದಿ ಬಲಿಯಾಗಿದ್ದಾರೆ. ಇನ್ನು 13,36,861 ಮಂದಿ ಸೋಂಕಿತರ ಪೈಕಿ 8,49,431 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.  ದೇಶದಲ್ಲಿ ಪ್ರಸ್ತುತ 4,56,071  ಸಕ್ರಿಯ ಪ್ರಕರಣಗಳಿವೆ.

Key words: total – 48,916 people – coronavirus – single day.