“ಹುಣಸೋಡು ಸ್ಪೋಟ ಪ್ರಕರಣ, ಅಗತ್ಯವಿದ್ದರೆ ಸಿಬಿಐ ತನಿಖೆಗೆ” : ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು,ಜನವರಿ,24,2021(www.justkannada.in) :  ಶಿವಮೊಗ್ಗದ ಹುಣಸೋಡು ಸ್ಪೋಟ ಪ್ರಕರಣ ರಾಜ್ಯದ ಪೊಲೀಸರೇ ಸಮಗ್ರ ತನಿಖೆ ನಡೆಸುತ್ತಾರೆ. ಸಿಬಿಐಗೆ ವಹಿಸುವ ಅಗತ್ಯ ಇಲ್ಲ. ಅಗತ್ಯಬಿದ್ದರೆ ಸಿಬಿಐಗೆ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.jkಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಮಾಹಿತಿ ಪಡೆದು ಕೊಂಡಿದ್ದಾರೆ. ಅಲ್ಲದೆ, ನಮ್ಮ ರಾಜ್ಯದ ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದು, ಅಂತಹ ಅವಶ್ಯಕತೆ ಬಂದರೆ ಸಿಬಿಐಗೆ ಒಪ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.Tornado,Explosion,Case,CBI probe,necessary,DCM,Govinda Karajola

ರಾಜ್ಯದಲ್ಲಿ ಗಣಿಗಾರಿಕೆಗೆ ಸ್ಪೋಟಕಗಳು ಬಳಸುವುದು ನಿಷೇಧಿಸಬೇಕಾಗಿದೆ. ಸ್ಪೋಟಕ ಸಾಮಗ್ರಿ ಖರೀದಿ, ಶೇಖರಣೆ ಬಗ್ಗೆ ಕೂಡ ಕಠಿಣ ನಿಯಮಗಳನ್ನು ರೂಪಿಸಲು ಸರ್ಕಾರ ಕ್ರಮ ವಹಿಸುತ್ತದೆ ಎಂದು ತಿಳಿಸಿದರು.

key words : Tornado-Explosion-Case-CBI probe-necessary-DCM-Govinda Karajola