ಚುನಾವಣೆ ಘೋಷಣೆಗೂ ಮುನ್ನವೇ ಸುಪ್ರೀಂ ಕೋರ್ಟ್’ಗೆ ಹೋಗಿದ್ದೇವೆ: ನಾಳೆ ಸೂಕ್ತ ಆದೇಶ ಹೊರ ಬೀಳಲಿದೆ ಎಂದ ಎಚ್.ವಿಶ್ವನಾಥ್

ಮೈಸೂರು, ಸೆಪ್ಟೆಂಬರ್ 22, 2019 (www.justkannada.in): ಚುನಾವಣೆ ಘೋಷಣೆಗೂ ಮುನ್ನವೇ ನಾವು ಸುಪ್ರೀಂ ಕೋರ್ಟ್’ಗೆ ಹೋಗಿದ್ದೇವೆ. ಹೀಗಾಗಿ ಚುನಾವಣೆಗೆ ತಡೆ ಆದೇಶ ಸಿಗಲಿದೆ ಎಂದು ಮಾಜಿ ಸಚಿವ, ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು.

ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ. ಯಾರು ದುಡ್ಡಿಗಾಗಿ ರಾಜೀನಾಮೆ ನೀಡಿಲ್ಲ. ಥರ್ಡ್ ಗ್ರೇಡ್ ಜನ ನಾನು ಮಾರಾಟ ಆದೆ ಅಂತಾ ಆರೋಪ ಮಾಡಿದ್ದಾರೆ. ಎಂಟಿಬಿ ನಾಗರಾಜ್ 10 ಕೋಟಿ ರೂ. ಕಾರಲ್ಲಿ ಓಡಾಡ್ತಾರೆ. ಅವರು ಮಾರಾಟ ಆಗಿದ್ದಾನಾ..? ಯಾರು ಈ ರೀತಿಯ ಆರೋಪ ಮಾಡಬೇಡಿ ಎಂದು ಮೈಸೂರಿನಲ್ಲಿ ಹೇಳಿದರು.

ನಮ್ಮ ಅನರ್ಹ ಶಾಸಕರ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಇದರ‌ ನಡುವೆ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ‌ ನಿಗದಿ ಮಾಡಿದೆ. ಸ್ಪೀಕರ್ ಆದೇಶ ಹಾಗೂ ಅವರ ನಡವಳಿಕೆಯನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಸುಪ್ರೀಂಕೋರ್ಟ್ ನಲ್ಲಿ ನಾಳೆ ಪ್ರಕರಣದ ವಿಚಾರಣೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಎಚ್ ವಿಶ್ವನಾಥ್ ಹೇಳಿದ ಪ್ರಮುಖ ವಿಷಯಗಳಿವು…

-ಮಾಧ್ಯಮಗಳು ಅನರ್ಹ ಶಾಸಕರು ಅಂತಾ ಬಳಸದಿರಿ. ಯಾವ ಶಾಸಕರು ದುಡ್ಡಿಗೆ ಮಾರಿಕೊಂಡವರಲ್ಲ. ಅಧಿಕಾರಕ್ಕಾಗಿ ಪದವಿಗಾಗಿ ಅಲ್ಲ ಒದ ತ್ಯಾಗ ಮಾಡಲ್ಲ.

– ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ, ಕ್ರಿಯಾಶೀಲತೆಯ ಪತನದಿಂದ ತೆಗೆದುಕೊಂಡ ನಿರ್ಧಾರ. ಎಂಟಿಬಿ ನಾಗರಾಜ್ 12 ಕೋಟಿ ಕಾರಿನಲ್ಲಿ ತಿರುಗುವರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆ 80 ಕೋಟಿ ಹಣ ಕೊಟ್ಟಿದ್ರು. ಮತ್ತೆ ಸಿಎಂ ಆಗಬೇಕೆಂಬ ಉದ್ದೇಶದಿಂದ ಹಣ ಸಂಗ್ರಹಿಸಿ ಕೊಟ್ಟಿದ್ರು.

– ಅಂತಹವರು ಹಣಕ್ಕೆ ಮಾರಿಕೊಂಡಿದ್ದಾರೆ ಅಂತಾ ಸಿದ್ದರಾಮಯ್ಯ ಹೇಳೋದು ಸರಿಯಲ್ಲ. ನಮಗೆ ಈಗಲೂ ಕುಮಾರಸ್ವಾಮಿ ನಾಯಕರು. ಅವರ ಬಗ್ಗೆ ಈಗಲೂ ಗೌರವವಿದೆ. ಕುಮಾರಸ್ವಾಮಿ ಅವರನ್ನು ಎಲ್ಲಾ ರೀತಿ ನೋಡಿಕೊಳ್ಳುತ್ತಿರುವವರು ನನ್ನ ಪ್ರಶ್ನೆಗೆ ಉತ್ತರಿಸಬೇಕು.