ನಾಳೆ ನಾವೇ ಪೇ ಸಿಎಂ ಪೋಸ್ಟರ್ ಅಂಟಿಸುತ್ತೇವೆ, ಏನು ಬೇಕಾದರೂ ಮಾಡಿಕೊಳ್ಳಲಿ- ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಸೆಪ್ಟಂಬರ್,22,2022(www.justkannada.In):   ಪೇ ಸಿಎಂ ಪೋಸ್ಟರ್ ಅಂಟಿಸಿದ ಹಿನ್ನೆಲೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದು ಈ ಹಿನ್ನೆಲೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ನಮ್ಮ ಕಾರ್ಯಕರ್ತರನ್ನ ಬಂಧಿಸಿದನ್ನ ಖಂಡಿಸುತ್ತೇನೆ. ಈ ಬಗ್ಗೆ ಯಾಕೆ ಸಿಎಂ ಅಷ್ಟು ತಲೆ ಕೆಡಿಸಿಕೊಂಡಿದ್ದಾರೆ. ನಾಳೆ ನಾವೇ ನಗರದಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸುತ್ತೇವೆ. ನಾಳೆ ಎಲ್ಲಾ ಶಾಸಕರು ಸೇರಿಕೊಂಡು ಪೋಸ್ಟರ್ ಅಂಟಿಸುತ್ತೇವೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ತಲೆ ಕೆಡಿಸಿಕೊಳ್ಳಲ್ಲ ಎಂದರು.

ನಮ್ಮ ಕ್ಯೂಆರ್ ಕೋಡ್ ಗೆ ಅನೇಕ ದೂರುಗಳು ಬಂದಿವೆ. ಅಧಿಕಾರದಲ್ಲಿ ಇರುವವರು ಇದನ್ನೆಲ್ಲಾ ಅರಗಿಸಿಕೊಳ್ಳಬೇಕು.  ಜನೋತ್ಸವದ ವೇಳೆ ಪೋಸ್ಟರ್ ಹಾಕಿದ್ರು.  ಆಗ ಕಾಣಲಿಲ್ವಾ ಬಿಬಿಎಂಪಿಯವರಿಗೆ ಬಿಜೆಪಿಯವರ ಪೋಸ್ಟರ್ ಕಾಣಲಿಲ್ವಾ..?  ಅವರ ಮೇಲೆ ಯಾಕೆ ಬಿಬಿಎಂಪಿ ಕೇಸ್ ಹಾಕಲಿಲ್ಲ ನಮ್ಮ ಬಗ್ಗೆ ಅವರು ಪೋಸ್ಟರ್ ಮಾಡಿದ್ದಾರೆ ಅದರ ಮೇಲೆ ಕ್ರಮ ಯಾಕಿಲ್ಲ ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.

Key words: Tomorrow – Pay CM- poster- DK Shivakumar.