ಮೈಸೂರು ದಸರಾ ಉದ್ಘಾಟಿಸಲು ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಧಿಕೃತ ಆಹ್ವಾನ.

Promotion

ಮೈಸೂರು,ಸೆಪ್ಟಂಬರ್,21,2022(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡಹಬ್ಬವನ್ನ ಉದ್ಘಾಟಿಸಲಿದ್ದಾರೆ.

ಸೆಪ್ಟಂಬರ್ 26 ರಂದು  ದಸರಾ ಉದ್ಘಾಟಿಸಲು ಆಗಮಿಸುವಂತೆ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ದೆಹಲಿಗೆ ತೆರಳಿ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮೈಸೂರು ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಲಿದ್ದಾರೆ.  ಇದೇ ವೇಳೆ ಕೇಂದ್ರ ಸಚಿವರಾದ ರಾಜೀವ್ ಚಂದ್ರ ಶೇಖರ್, ನಿರ್ಮಲಾ ಸೀತಾರಾಮನ್,  ಪ್ರಹ್ಲಾದ್ ಜೋಶಿ  ಶೋಭಾ ಕರಂದ್ಲಾಜೆ ಸೇರಿ ಹಲವರಿಗೆ ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.

Key words: tomorrow- Official -invitation – President -Draupadi Murmu – inaugurate- Mysore dasara