ನಾಳೆ ‘114’ನಮ್ಮ ಕ್ಲಿನಿಕ್’ಗಳ ಉದ್ಘಾಟನೆ: ಆರೋಗ್ಯ ಸಚಿವ ಸುಧಾಕರ್

udupi-corona-green-zone-month-minister-dr-k-sudhakar
Promotion

ಬೆಂಗಳೂರು, ಡಿಸೆಂಬರ್ 13,2022 (www.justkannada.in): ಕರ್ನಾಟಕ ಸರ್ಕಾರವು, ದುರ್ಬಲ ವರ್ಗಗಳ ಜನರಿಗೆ, ಅದರಲ್ಲಿಯೂ ವಿಶೇಷವಾಗಿ ಕೊಳಗೇರಿ ನಿವಾಸಿಗಳು, ದಿನಗೂಲಿ ನೌಕರರು ಹಾಗೂ ಸಮಾಜದ ಆರ್ಥಿಕವಾಗಿ ಬಲಹೀನವಾಗಿರುವ ಸಮಾಜದ ಜನರಿಗೆ ಪ್ರಾಥಮಿಕ ಆರೋಗ್ಯಸೇವಾ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ, ಡಿಸೆಂಬರ್ 14(ನಾಳೆ) ರಂದು 114 ‘ನಮ್ಮ ಕ್ಲಿನಿಕ್’ಗಳನ್ನು ಉದ್ಘಾಟಿಸಲಿದೆ.

ಈ ಚಿಕಿತ್ಸಾಲಯಗಳಲ್ಲಿ 12 ವಿವಿಧ ರೀತಿಯ ಆರೋಗ್ಯ ಸೇವೆಗಳು ಲಭ್ಯವಿದ್ದು, ಪ್ರತಿ ಕ್ಲಿನಿಕ್‌ ನಲ್ಲಿ ಓರ್ವ ವೈದ್ಯಕೀಯ ಅಧಿಕಾರಿ, ಓರ್ವ ಶುಶ್ರೂಷಕಿ, ಲ್ಯಾಬ್ ಟೆಕ್ನಿಷಿಯನ್ ಹಾಗೂ ಓರ್ವ ‘ಡಿ’ ಗ್ರೂಪ್ ಕಾರ್ಮಿಕರಿರುತ್ತಾರೆ.

ಈ ಯೋಜನೆಗೆ ರೂ.೧೫೦ ಕೋಟಿ ವೆಚ್ಚವಾಗಲಿದ್ದು, ಬಹುಪಾಲು ಕ್ಲಿನಿಕ್‌ ಗಳು ಸರ್ಕಾರಿ ಕಟ್ಟಡಗಳಲ್ಲಿ ಕಾರ್ಯನಿರ್ವಹಣೆಯನ್ನು ಆರಂಭಿಸಲಿದೆ.

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 14ರಂದು ಈ ‘ನಮ್ಮ ಕ್ಲಿನಿಕ್’ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಆರಂಭದಲ್ಲಿ ರಾಜ್ಯಾದ್ಯಂತ ಒಂದೇ ಬಾರಿಗೆ 114 ಕ್ಲಿನಿಕ್‌ ಗಳನ್ನು ಉದ್ಘಾಟಿಸಲಾಗುವುದು. ಇದು ಚರಿತ್ರೆಯಲ್ಲೇ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ೧೦೦ಕ್ಕೂ ಹೆಚ್ಚು ಸಂಖ್ಯೆಯ ಕ್ಲಿನಿಕ್‌ ಗಳನ್ನು ಉದ್ಘಾಟಿಸುತ್ತಿರುವ ಕಾರ್ಯಕ್ರಮವಾಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಲಿದೆ,” ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ನಮ್ಮ ಸರ್ಕಾರವು ರಾಜ್ಯಾದ್ಯಂತ ಒಟ್ಟು 438 ನಮ್ಮ ಕ್ಲಿನಿಕ್‌ ಗಳನ್ನು ಆರಂಭಿಸಲಿದ್ದು, ಉಳಿದ ಕ್ಲಿನಿಕ್‌ಗಳು ಜನವರಿ ೨೦೨೩ರ ವೇಳೆಗೆ ಕಾರ್ಯಾರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.august-15-number-coronavirus-infections-increase-minister-dr-k-the-reformer

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು ೨೪೩ ನಮ್ಮ ಕ್ಲಿನಿಕ್‌ ಗಳು ಕಾರ್ಯನಿರ್ವಹಿಸಲಿವೆ. ಈ ಸಂಬಂಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಜನವರಿ ಎರಡನೇ ವಾರದ ವೇಳೆಗೆ ಸಾರ್ವಜನಿಕರ ಸೇವೆಗಳು ಆರಂಭವಾಗಲಿವೆ. ಪ್ರತಿ ‘ನಮ್ಮ ಕ್ಲಿನಿಕ್’ ೧೦,೦೦೦ ದಿಂದ ೨೦,೦೦೦ ಜನರಿಗೆ ಸೇವೆಗಳನ್ನು ಒದಗಿಸಲಿವೆ.

ಈ ಕ್ಲಿನಿಕ್‌ ಗಳಲ್ಲಿ ಲಭ್ಯವಿರುವ ಸೇವೆಗಳೆಂದರೆ ಗರ್ಭಿಣಿಯರು, ಪ್ರಸವಪೂರ್ವ ಚಿಕಿತ್ಸೆ, ನವಜಾತ ಶಿಶು, ಬಾಲ್ಯ ಹಾಗೂ ಹದಿಹರೆಯದವರ ಆರೈಕೆ, ಸಾರ್ವತ್ರಿಕ ಚುಚ್ಚುಮದ್ದು ಸೇವೆಗಳು, ಕುಟುಂಬ ಕಲ್ಯಾಣ, ಸಂತಾನೋತ್ಪತ್ತಿ ನಿಯಂತ್ರಣ, ಸೋಂಕು ಖಾಯಿಲೆಗಳ ನಿರ್ವಹಣೆ, ಸಾಮಾನ್ಯ ಹಾಗೂ ಕಿರು ಆರೋಗ್ಯ ಸೇವೆಗಳು, ಮಧುಮೇಹ, ರಕ್ತದೊತ್ತಡ ನಿರ್ವಹಣೆ, ಗಂಭೀರ ಖಾಯಿಲೆಗಳು, ಬಾಯಿ ಚಿಕಿತ್ಸೆ, ಇತ್ಯಾದಿ.

ಸ್ತನ ಹಾಗೂ ಗರ್ಭಾಶಯ ಕ್ಯಾನ್ಸರ್, ಕಣ್ಣಿನ ತಪಾಸಣೆಯಂತಹ ತೃತೀಯ ಆರೈಕೆಯ ಅಗತ್ಯವಿರುವಂತಹ ರೋಗಿಗಳಿಗೆ ಇತರೆ ಆಸ್ಪತ್ರೆಗಳಿಗೆ ಉಚಿತ ರೆಫೆರೆಲ್‌ ಗಳನ್ನೂ ಸಹ ಮಾಡುವ ವ್ಯವಸ್ಥೆ ಇರುತ್ತದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಹಿರಿಯ ನಾಗರೀಕರ ಚಿಕಿತ್ಸೆ, ತುರ್ತು ವೈದ್ಯಕೀಯ ಸೇವೆಗಳು, ಆರೋಗ್ಯ ತಪಾಸಣೆಗಳು ಹಾಗೂ ಔಷಧಗಳನ್ನು ಉಚಿತವಾಗಿ ಒದಗಿಸಲಾಗುವುದು. ಈ ನಮ್ಮ ಕ್ಲಿನಿಕ್‌ ಗಳಿಗಾಗಿ ೧೪ ಪ್ರಯೋಗಾಲಯ ತಪಾಸಣೆಗಳು, ಟೆಲಿಕನ್ಸಲ್ಟೇಷನ್ ಸೇವೆಗಳು, ಯೋಗಕ್ಷೇಮ ಚಟುವಟಿಕೆಗಳನ್ನೂ ಸಹ ಉಚಿತವಾಗಿ ಒದಗಿಸಲಾಗುವುದು.

ಈ ನಮ್ಮ ಕ್ಲಿನಿಕ್‌ ಗಳಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಈಗಾಗಲೇ 300 ವೈದ್ಯರನ್ನು ನೇಮಕ ಮಾಡಿದ್ದು, ಕೆಲವು ಸ್ಥಳಗಳಲ್ಲಿ ವೈದ್ಯರ ಕೊರತೆ ಇದೆ. ಇಂತಹ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಹಾಗೂ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವಂತಹ ೮೦-೧೦೦ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Tomorrow – inauguration – 114 -our clinics-Health Minister -Sudhakar