ನಾಳೆಯೇ ಸಂಪುಟ ವಿಸ್ತರಣೆ, ನೂತನ ಸಚಿವರ ಪ್ರಮಾಣ ವಚನ- ರಣದೀಪ್ ಸಿಂಗ್ ಸುರ್ಜೇವಾಲ.

Promotion

ನವದೆಹಲಿ,ಮೇ,26,2023(www.justkannada.in):  ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಇಂದು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ,  ಸಂಪುಟ ವಿಸ್ತರಣೆ ಕುರಿತು ನಾವು ತೀರ್ಮಾನಿಸಿಲ್ಲ ಸಂಪುಟದ ಬಗ್ಗೆ ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಅಧಿಕಾರವಿದೆ.  ಸಂಪುಟ ವಿಸ್ತರಣೆ ಬಗ್ಗೆ ಸಿಎಂಗೆ ಪರಮಾಧಿಕಾರವಿದೆ ಎಂದರು.

ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ನಿರ್ಧಾರ ಮಾಡುತ್ತಾರೆ. ಹಲವು ಹೆಸರುಗಳನ್ನು ಅವರು ಮುಂದಿಟ್ಟಿದ್ದಾರೆ. ಎಲ್ಲವೂ ಕೂಡ ಸಿಎಂ ಸಿದ್ದರಾಮಯ್ಯ ವಿವೇಚನೆ ಅವರ ಪರಮಾಧಿಕಾರ. ನಾಳೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.

Key words: Tomorrow -cabinet –expansion- new minister- Randeep Singh Surjewala.