ನಾನು ಕಾಂಗ್ರೆಸ್ ​ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್​ ಗೆ ಹೇಳಿದ್ದೇನೆ- ಶಾಸಕ ಜಿ.ಟಿ ದೇವೇಗೌಡ.

Promotion

ಬೆಂಗಳೂರು, ನವೆಂಬರ್,18,2023(www.justkannada.in):  ವಿಪಕ್ಷಗಳ ಶಾಸಕರು ಮುಖಂಡರನ್ನ ಸೆಳೆಯುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದ್ದು  ಡಿಸಿಎಂ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರನ್ನು ಭೇಟಿಯಾಗಿ ಆಹ್ವಾನವನ್ನ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ  ಶಾಸಕ ಜಿ.ಟಿ ದೇವೇಗೌಡ, ನಾನು ಕಾಂಗ್ರೆಸ್​ ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್​ ಗೆ ಹೇಳಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಜಿಟಿ ದೇವೇಗೌಡ, ಸದಾಶಿವನಗರದಲ್ಲಿ ಡಿಕೆ ಶಿವಕುಮಾರ್ ಅವರೇ ಬಂದು ನನ್ನನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ಎಸ್​.ಟಿ.ಸೋಮಶೇಖರ್, ಪುಲಿಕೇಶಿ ನಗರ ಶಾಸಕರು, ನೆಲಮಂಗಲ ಶಾಸಕರು ಇದ್ದರು. ಈ ಹಿಂದೆ ಪಕ್ಷಕ್ಕೆ ಕರೆದರೂ ಯಾಕೆ ಬರಲಿಲ್ಲ ಎಂದು ಹೇಳಿದ್ದರು. ಅದೃಷ್ಟ ಇರುವವರಿಗೆ ಅಧಿಕಾರ ಸಿಗುತ್ತೆ, ಇಲ್ಲಂದರೆ ಸಿಗಲ್ಲ ಅಂತ ಹೇಳಿರುವುದಾಗಿ ತಿಳಿಸಿದರು.

ನಾನು ಕಾಂಗ್ರೆಸ್​​ಗೆ ಹೋಗುವ ಪರಿಸ್ಥಿತಿ ಇಲ್ಲ. ನಾನು ಕಾಂಗ್ರೆಸ್​ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್ ​ಗೆ ಹೇಳಿದ್ದೇನೆ. ಜೆಡಿಎಸ್​ನ 19 ಶಾಸಕರೂ ಒಟ್ಟಾಗಿ ಇದ್ದೇವೆ. ಯಾವುದೇ ರೀತಿಯಲ್ಲಿ ಪಕ್ಷವನ್ನು ಒಡೆಯುವ ಕೆಲಸ ಮಾಡಲ್ಲ ಎಂದು  ಜಿ.ಟಿ ದೇವೇಗೌಡರು ತಿಳಿಸಿದರು.

Key words: told -DK Shivakumar – will -not j-oin -Congress – MLA -GT Deve Gowda