ಇಂದು ಕೊರೊನಾ ಮುನ್ನೆಚ್ಚರಿಕೆ ನಡುವೆ ಟೋಕಿಯೋ ಒಲಿಂಪಿಕ್ಸ್’ಗೆ ಚಾಲನೆ

Promotion

ಬೆಂಗಳೂರು, ಜುಲೈ 23, 2021 (www.justkannada.in): ಇಂದು ಟೋಕಿಯೋ ಒಲಿಂಪಿಕ್ಸ್ ಜಪಾನ್‌ನ ಟೋಕಿಯೋ ನಗರದಲ್ಲಿ ಉದ್ಘಾಟನೆಯಾಗಲಿದೆ.

ಕೊರೊನಾವೈರಸ್‌ನ ಭೀತಿಯಿಂದಾಗಿ ಈ ಬಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಲವೇ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ವೈರಸ್‌ನಿಂದ ದೂರವಿರಲು ಉದ್ಘಾಟನಾ ಸಮಾರಂಭಕ್ಕೆ ಕಡಿಮೆ ಪ್ರಮಾಣದಲ್ಲಿ ಕ್ರೀಡಾಪಟುಗಳನ್ನು ಕಳುಹಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮರುದಿನ ಸ್ಪರ್ಧಾಕಣಕ್ಕೆ ಇಳಿಯಲಿರುವ ಕ್ರೀಡಾಪಟುಗಳು ಈ ಸಮಾರಂಭದಿಂದ ಹೊರಗುಳಿಯಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ ಎಂದು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್‌ನ ಸೆಕ್ರೇಟರಿ ಜನರಲ್ ರಾಜೀವ್ ಮೆಹ್ತಾ ಹೇಳಿದ್ದಾರೆ.

ಉದ್ಘಾಟನಾ ಸಮಾರಂಭದ ಮರುದಿನ ಬಾಕ್ಸರ್‌ಗಳು, ಆರ್ಚರ್‌ಗಳು ಮತ್ತು ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡ ಕೂಡ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ.