ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ: ಮಾಜಿ ಸಿಎಂ ಭೇಟಿಯಾಗಿ ಆಶೀರ್ವಾದ ಪಡೆದ ಡಾ. ಸುಧಾಕರ್ ..

Promotion

ಬೆಂಗಳೂರು,ಫೆ,6,2020(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು 10 ಮಂದಿ ಶಾಸಕರು ಸಜ್ಜಾಗಿದ್ದಾರೆ.

ಈ ನಡುವೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಶಾಸಕ ಡಾ.ಸುಧಾಕರ್  ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನ ಭೇಟಿಯಾಗಿ  ಆಶೀರ್ವಾದ ಪಡೆದಿದ್ದಾರೆ. ಎಸ್.ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಡಾ.ಸುಧಾಕರ್  ಆಶೀರ್ವಾದ ಪಡೆದರು.

ಬಳೀಕ ಮಾತನಾಡಿದ ಸುಧಾಕರ್, ನಮ್ಮ ಬಗ್ಗೆ ಹೇಳಬಾರದನ್ನೆಲ್ಲಾ ಹೇಳಿದರು. ಷಡ್ಯಂತ್ರ ಮಾಡಿದವರು ಈಗ ಆತ್ಮಾವಲೋಕನ ಮಾಡಿಕೊಳ್ಳಲಿ. ಸಂವಿಧಾನ  ಬಗ್ಗೆ ಮಾತನಾಡುವವರು ಅದರ ವಿರುದ್ದವಾಗಿಯೇ ನಡೆದುಕೊಳ್ಳುತ್ತಾರೆ. ಅಂತವರು ಹೊರಗೆ ಹೋಗುವ ಕಾಲ ಬಂದಿದೆ. ನಮ್ಮ ಸರ್ಕಾರ ಪಾರದರ್ಶಕ ಜನಸ್ನೇಹಿಯಾಗಿ ನಡೆದುಕೊಳ್ಳುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಗೆದ್ದ 11 ನೂತನ ಶಾಸಕರ ಪೈಕಿ ಮಹೇಶ್ ಕುಮುಟಳ್ಳಿಗೆ ಶಾಸಕ ಸ್ಥಾನ ಕೈತಪ್ಪಿದ್ದು ಉಳಿದ 10 ಮಂದಿ ಶಾಸಕರು ನೂತನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Key words: Today – swearing- new minister-MLA-Dr Sudhakar-meet- former CM