ಇಂದಿನಿಂದ ವರ್ಷದ ಮೊದಲ ಅಧಿವೇಶನ ಆರಂಭ: ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆ ಸಜ್ಜು….

ಬೆಂಗಳೂರು,ಜ,28,2021(www.justkannada.in): ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬಿಕ್ಕಟ್ಟಿನ ನಡುವೆ ಇಂದಿನಿಂದ ವರ್ಷದ ಮೊದಲ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ.jk

ಇಂದಿನಿಂದ ಫೆಬ್ರವರಿ 5 ರವರೆಗೆ ರಾಜ್ಯ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ನಡೆಯಲಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ರುಢಾ ಬಾಯಿ ವಾಲಾ  ಅವರು ಭಾಷಣ ಮಾಡಲಿದ್ದಾರೆ. ನಂತರ ಒಂದು ದಿನದ ಮಟ್ಟಿಗೆ ಅಧಿವೇಶನವ ಮುಂದೂಡಿಕೆಯಾಗಲಿದೆ.

ಜ.29ರಿಂದ ಸರ್ಕಾರದ ಅಧಿಕೃತ ಕಾರ್ಯಕಲಾಪಗಳು ಆರಂಭವಾಗಲಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಇನ್ನು ಇದೀಗ ಸಿಎಂ ಬಿಎಸ್ ವೈ ಸಂಪುಟ ಸೇರಿರುವ ನೂತನ ಸಚಿವರು ಪ್ರತಿಪಕ್ಷಗಳು ಒಡ್ಡುವ ಅಸ್ತ್ರ ಗಳನ್ನ ಎದುರಿಸಬೇಕಿದೆ.Start - session –today-corona-test-member

ಕೋವಿಡ್‌ನಿಂದಾಗಿರುವ ಆರ್ಥಿಕ ಸಂಕಷ್ಟ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅತಿವೃಷ್ಟಿ ಪರಿಹಾರ ವಿಳಂಬ ಸೇರಿ ಅನೇಕ ವಿಚಾರಗಳು ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.

Key words: Today -start -first session – year-speech- Governor