ಇಂದು ಗಾನಗಂಧರ್ವ ಎಸ್.ಪಿ.ಬಾಲಸುಬ್ರಮಣ್ಯಂ ಪುಣ್ಯಸ್ಮರಣೆ

Promotion

ಬೆಂಗಳೂರು, ಸೆಪ್ಟೆಂಬರ್ 25, 2021 (www.justkannda.in): ಇಂದು ಎಸ್.ಪಿ. ಬಾಲಸುಬ್ರಮಣ್ಯಂ ಅವರ ಪುಣ್ಯ ಸ್ಮರಣೆ ದಿನ, ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ.

ಅವರ ಪುಣ್ಯ ಸ್ಮರಣೆ ಅಂಗವಾಗಿ ಎಸ್’ಪಿಬಿ ನೆನಪುಗಳನ್ನು ಅಭಿಮಾನಿಗಳು, ಗಾಯನ ಲೋಕದ ಹಿತೈಷಿಗಳು ಮೆಲುಕು ಹಾಕಿದ್ದಾರೆ.

ಕಳೆದ ವರ್ಷ ಕೊರೋನಾ ಬಳಿಕ ಶ್ವಾಸಕೋಶದ ಸೋಂಕಿಗೊಳಗಾಗಿದ್ದ ಎಸ್ ಪಿಬಿ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಬಹುಭಾಷಾ ಗಾಯಕ, ಗಾನಗಂಧರ್ವ, ಎಲ್ಲರ ಮೆಚ್ಚಿನ ಎಸ್.ಪಿ. ಬಾಲಸುಬ್ರಮಣ್ಯಂ ಅವರನ್ನು ಅವರ ಗಾಯನದ ಹಾಡುಗಳ ಮೂಲಕ ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. ಕೆಲವೆಡೆ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

key words: today sp balasubrahmanyam punya smarane