ಇಂದು ನಟ ದಿ. ಪುನೀತ್ ರಾಜ್ ಕುಮಾರ್ ಜನ್ಮದಿನ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ: ಅಪ್ಪು ನೆನೆದು ಪೋಸ್ಟ್ ಹಾಕಿದ ಶಿವಣ್ಣ.

Promotion

ಬೆಂಗಳೂರು,ಮಾರ್ಚ್,17,2023(www.justkannada.in):  ಇಂದು ಕರ್ನಾಟಕ ರತ್ನ, ನಟ ಪವರ್ ಸ್ಟಾರ್, ದಿ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು ಈ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ಬಳಿಗೆ ಅಭಿಮಾನಿಗಳ ದಂಡೇ ಆಗಮಿಸುತ್ತಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಅಪಾರ  ಅಭಿಮಾನಿಗಳು ನೆರೆದಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಸೆಲೆಬ್ರಿಟಿಗಳು  ಅಭಿಮಾನಿಗಳು ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ.  ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ನಿಯೋಜನೆ ಮಾಡಲಾಗಿದೆ.

ಇನ್ನು ಕಂಠೀರವ ಸ್ಟುಡಿಯೋಗೆ ಡಾ.ರಾಜ್ ಕುಟುಂಬಸ್ಥರು ಭೇಟಿ ನೀಡಿದ್ದು ದಿ. ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಇನ್ನು ನಟ ಅಪ್ಪು ನೆನೆದು  ಪೋಸ್ಟ್ ಹಾಕಿರುವ ನಟ ಶಿವರಾಜ್ ಕುಮಾರ್ ,  ನನಗೆ ಪ್ರತಿ ಪದವು ಪ್ರೀತಿ ಮಮತೆಯಿಂದ ಕೂಡಿದ್ದು. ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನೀನು ನಕ್ಕರೆ ಎಲ್ಲರೂ ನಗುತ್ತಾ ಇದ್ದರು. ನಿನ್ನ ಜೀವನ  ಒಂದು ದಂತಕಥೆ. ನಿನ್ನ ನೆನಪು ಎಂದಿಗೂ ಅಮರ ಹ್ಯಾಪಿ ಬರ್ತಡೆ ಅಪ್ಪು  ಎಂದು ಶುಭಾಶಯ ತಿಳಿಸಿದ್ದಾರೆ.

Key words: Today – actor –punith rajkumar –birthday-family- members –spacial pooja