ಬಗೆಹರಿಯದ ಟಿಪ್ಪು ಜಯಂತಿ ಅಚರಣೆ ಸ್ಥಳದ ಸಮಸ್ಯೆ: ಮುಡಾ ಕಚೇರಿ ಮುಂಭಾಗ ಶಾಸಕ ತನ್ವೀರ್ ಸೇಠ್ ಪ್ರತಿಭಟನೆ…

Promotion

ಮೈಸೂರು,ನ,7,2019(www.justkannada.in):  ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಬನ್ನಿಮಂಟಪ ಮೈದಾನದಲ್ಲಿ ಅವಕಾಶ ಕೊಡುವಂತೆ ಆಗ್ರಹಿಸಿ ಮಾಜಿ ಸಚಿವ ತನ್ವೀರ್ ಸೇಠ್  ನಗರದ ಮುಡಾ ಕಚೇರಿ ಮುಂಭಾಗ ಪ್ರತಿಭಟನೆಗೆ ಕುಳಿತಿದ್ದಾರೆ.

ಟಿಪ್ಪು ಜಯಂತಿ ಅಚರಣೆ ಸ್ಥಳದ ಸಮಸ್ಯೆ ಬಗೆಹರಿದಿಲ್ಲ. ಟಿಪ್ಪು ಜಯಂತಿ ಆಚರಣೆಗೆ ಸ್ಥಳದ ನಿರ್ಧಾರ ಆಗುವವರೆಗೆ ನಮ್ಮ ಪ್ರತಿಭಟನೆ ಕೈ ಬೀಡಲ್ಲ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ. ಮುಡಾ ಮುಂಭಾಗ ಪ್ರತಿಭಟನೆಗೆ ಕುಳಿತಿರುವ ಮಾಜಿ ಸಚಿವ ತನ್ವೀರ್ ಸೇಠ್, ಈಗಾಗಲೇ ಬನ್ನಿಮಂಟಪದ ಮೈದಾನವನ್ನು ಬಾಡಿಗೆಗೆ ನೀಡುತ್ತಿದ್ರು. ಅದೇ ರೀತಿ ನಮಗೂ ಬಾಡಿಗೆಗೆ ಕೊಡಿ. ಯಾವ ಸಮಸ್ಯೆಯಾಗಿದೆ ಅಂತಾ ಜಿಲ್ಲಾಧಿಕಾರಿಗಳು ಬಂದು ಹೇಳಲಿ ಎಂದು ಆಗ್ರಹಿಸಿದರು.

ಸರ್ಕಾರದ ಕೈ ಗೊಂಬೆಗಳಾಗಿ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಸರ್ಕಾರ ಇದಿಯೋ ಸತ್ತಿದಿಯೋ ಅಂತಾ ತಿಳಿತಿಲ್ಲ. ಖಾಸಗಿಯಾಗಿ ಅಚರಣೆ ಮಾಡುವುದಕ್ಕೂ ಸರ್ಕಾರ ತೊಂದರೆ ನೀಡುತ್ತಿದೆ. ಹಲವು ಸಂಘಟನೆಗಳು ನಮ್ಮ ಬೆಂಬಲಕ್ಕೆ ನಿಂತಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.

ನಿನ್ನೆಯೂ ಸಹ ಮುಡಾ ಕಚೇರಿ ಮುಂಭಾಗ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಟಿಪ್ಪು ಜಯಂತಿ ಆಚರಣೆಗೆ ಸ್ಥಳ ನಿರ್ಧಾರ ಮಾಡುವಂತೆ ಆಗ್ರಹಿಸಿ ಇಂದು ಸಹ ಧರಣಿ ಮುಂದುವರೆದಿದೆ.

Key words:  Tipu Jayanti -celebration –issue-Muda office – Tanveer Sait- protests