ಟಿಪ್ಪು ಇತಿಹಾಸ ತೆಗೆಯುವ ವಿಚಾರ: ರಾಷ್ಟ್ರಪತಿ ಭಾಷಣದ ಹೇಳಿಕೆ ಉಲ್ಲೇಖಿಸಿ ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಂಸದ ವಿ.ಎಸ್ ಉಗ್ರಪ್ಪ…

Promotion

ಕೊಪ್ಪಳ,ಅ,30,2019(www.justkannada.in):  ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾಸ ತೆಗೆದು ಹಾಕಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ರಾಷ್ಟ್ರಪತಿ ಅವರ ಭಾಷಣ ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ.

ರಾಷ್ಟ್ರಪತಿ ರಮನಾಥ್  ಕೋವಿಂದ್ ಅವರು ಈ ಹಿಂದೆ ಭಾಷಣ ವೇಳೆ ಟಿಪ್ಪು ರಾಷ್ಟ್ರಪ್ರೇಮಿ ಎಂದಿದ್ದಾರೆ. ಹೀಗಾಗಿ ಬಿಜೆಪಿಯವರು ಒಮ್ಮೆ ರಾಷ್ಟ್ರಪತಿ ಅವರ ಭಾಷಣ ಕೇಳಲಿ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ತಿರುಗೇಟು ನೀಡಿದರು.

ಕೊಪ್ಪಳದಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿ.ಎಸ್ ಉಗ್ರಪ್ಪ, ಟಿಪ್ಪು ಸುಲ್ತಾನ್ ರಾಷ್ಟ್ರಪ್ರೇಮಿ ಎಂದು ರಾಷ್ಟ್ರಪತಿಗಳು ಭಾಷಣದ ವೇಳೆ ಹೇಳಿದ್ದಾರೆ. ಹಾಗಾದ್ರೆ  ರಾಷ್ಟ್ರಪತಿಗಳ ಭಾಷಣ ಸುಳ್ಳಾ ಎಂದು ಪ್ರಶ್ನಿಸಿದರು. ಜತೆಗೆ ಕೆಜೆಪಿ  ಪಕ್ಷ ಕಟ್ಟಿದಾಗ ಟಿಪ್ಪು ಬಗ್ಗೆ ಬಿಎಸ್ ಯಡಿಯೂರಪ್ಪ ಏನಂದಿದ್ದರು. ಟಿಪ್ಪು ಜಯಂತಿ ಆಚರಣೆ ನನ್ನ ಗುರಿ ಎಂದು ಬಿಎಸ್ ವೈ ಅಂದು ಹೇಳಿದ್ದರು. ಕೆಜೆಪಿಯಲ್ಲಿ ಇದ್ದಾಗ ಒಂದು ನಿಲುವು ಬಿಜೆಪಿಗೆ ಬಂದಾಗ ಒಂದು ನಿಲುವನ್ನ ಬಿಎಸ್ ವೈ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.

Key words: Tippu – history –bjp government-Former MP -VS Ugrappa