ಪ್ರಧಾನಿ ನರೇಂದ್ರ ಮೋದಿ ಅವರ ನಿಗದಿತ ಕಾರ್ಯಕ್ರಮದಲ್ಲಿ ಸಮಯ ಬದಲಾವಣೆ

Promotion

ಮೈಸೂರು, ಜೂನ್ 19, 2022 (www.justkannada.in): ಪ್ರಧಾನಿ ನರೇಂದ್ರ ಮೋದಿ‌ ಅವರ ನಿಗದಿತ ಕಾರ್ಯಕ್ರಮದಲ್ಲಿ ಸಮಯ ಬದಲಾವಣೆ ಆಗಲಿದೆ.

ಸೋಮವಾರ 12 ಗಂಟೆಗೆ ಬೆಂಗಳೂರಿಗೆ ಬರಬೇಕಿದ್ದ ಮೋದಿ ಅವರು ಒಂದೂವರೆ ಗಂಟೆ ತಡವಾಗಿ  ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ಜೂನ್ 20ರ ಎಲ್ಲಾ ಕಾರ್ಯಕ್ರಮಗಳಲ್ಲೂ ಸಮಯ ವ್ಯತ್ಯಾಸವಾಗಲಿದೆ.

ಮೈಸೂರಿನ  ಮಹಾರಾಜ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಭೆ ಸಂಜೆ 5 ಕ್ಕೆ ನಿಗದಿಯಾಗಿತ್ತು. ಆದರೆ ಆ ಕಾರ್ಯಕ್ರಮಕ್ಕೆ 6.05 ಕ್ಕೆ ಮೋದಿ ಅವರು ಆಗಮಿಸಲಿದ್ದಾರೆ.

ನಂತರ 7.30ಕ್ಕೆ ಚಾಮುಂಡಿ ತಾಯಿ ದರ್ಶನಕ್ಕೆ ತೆರಳಬೇಕಿದ್ದ ಮೋದಿ ಅವರು ಬದಲಾದ ಸಮಯದಲ್ಲಿ 8.15ಕ್ಕೆ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.