ಹುಲಿ ಉಗುರು ಪ್ರಕರಣ: ನಟ ದರ್ಶನ್, ಜಗ್ಗೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ನಿವಾಸದಲ್ಲಿ ಅರಣ್ಯಾಧಿಕಾರಿಗಳಿಂದ ಶೋಧ.

Promotion

ಬೆಂಗಳೂರು,ಅಕ್ಟೋಬರ್,25,2023(www.justkannada.in): ಹುಲಿ ಉಗುರು ಪೆಂಡೆಂಟ್  ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೇಂಜಿಂಗ್ ಸ್ಟಾರ್  ದರ್ಶನ್, ನಟ ಹಾಗೂ ಸಂಸದ ಜಗ್ಗೇಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸಕ್ಕೆ  ಅರಣ್ಯಾಧಿಕಾರಿಗಳು ಭೇಟಿ ನೀಡಿ  ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ನಟ ದರ್ಶನ್ ನಿವಾಸದಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದಾರೆ. ನಟ ದರ್ಶನ್ ನಿವಾಸದಲ್ಲಿ ಎರಡು ತಂಡದಿಂದ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ.

ಹಾಗೆಯೇ ಉಗುರು ಪೆಂಡೆಂಟ್ ಕೇಸ್ ನಟ ಜಗ್ಗೇಶ್ ಗೂ ಸಂಕಷ್ಟ ಎದುರಾಗಿದ್ದು, ನಟ ಜಗ್ಗೇಶ್ ನಿವಾಸದಲ್ಲಿ ಶೋಧ ನಡೆಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ನಿವಾಸದಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದಾರೆ.ಸದ್ಯ ರಾಕ್ ಲೈನ್ ವೆಂಕಟೇಶ್ ವಿದೇಶ ಪ್ರವಾಸದಲ್ಲಿದ್ದಾರೆ. ರಾಕ್ ಲೈನ್ ವೆಂಕಟೇಶ್ ಗೆ ಅಧಿಕಾರಿಗಳು  ನೋಟಿಸ್ ನೀಡಿದ್ದಾರೆ. ರಾಜಾಜಿನಗರದಲ್ಲಿನ ನಿವಾಸದಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ನೋಟಿಸ್ ಜಾರಿಗೊಳಿಸಲಾಗಿದೆ ಎನ್ನಲಾಗಿದೆ.

Key words: Tiger -claw- case- Search – residence – actor –Darshan-Jaggesh-rock line Venkatesh.