‘’ಥಮ್ಸ್ ಅಪ್’’ ಮಾಡಿ ಸ್ವಾಗತ ಕೋರಿದ ಶಾಸಕ :  ವಿದ್ಯಾರ್ಥಿಗಳಿಗೆ ಸಂತಸ…!

Promotion

ಮಂಡ್ಯ,ಜನವರಿ,01,2021(www.justkannada.in) : ಕೊರೊನಾದ ಮುಂಜಾಗ್ರತಾ ಕ್ರಮಗಳ ಜೊತೆ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಶಾಲಾ-ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ, ಥಮ್ಸ್ ಅಪ್ ಮಾಡುವ ಮೂಲಕ ಶಾಸಕ ಸಿ.ಎಸ್.ಪುಟ್ಟರಾಜು ತರಗತಿಗೆ ಬರಮಾಡಿಕೊಂಡಿದ್ದಾರೆ.jk-logo-justkannada-mysoreಕೊರೊನಾದಿಂದ ರಾಜ್ಯಾದ್ಯಂತ ಮುಚ್ಚಲ್ಪಟ್ಟ ಶಾಲಾ-ಕಾಲೇಜುಗಳು 10 ತಿಂಗಳು ಬಳಿಕ ಇಂದು ಮತ್ತೆ ತೆರೆಯುತ್ತಿವೆ. ಶಾಸಕ ಪುಟ್ಟರಾಜು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿರೊ ಸರ್ಕಾರಿ ದಪವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ಆದರದಿಂದ ಸ್ವಾಗತಿಸಿದ್ದಾರೆ.Thums up-welcome-Requested-Legislator-Happy-students ...!

ಶಾಸಕರ ಸ್ವಾಗತಕ್ಕೆ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ. ಹತ್ತು ತಿಂಗಳ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದು, ತಮ್ಮ ಸ್ನೇಹಿತರನ್ನು ಕೊಠಡಿ, ಶಿಕ್ಷಕರನ್ನು ನೋಡಿ ಸಂತಸಗೊಂಡಿದ್ದಾರೆ. ಗುರುಗಳಿಗೆ ಹೊಸ ವರ್ಷದ ಶುಭಾಶಯಗಳು ವಿನಿಮಯ ಮಾಡಿಕೊಂಡಿದ್ದಾರೆ.

key words : Thums up-welcome-Requested-Legislator-
Happy-students …!