‘ಕೆಜಿಎಫ್-ಚಾಪ್ಟರ್ 1’ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ

Promotion

ಬೆಂಗಳೂರು, ಡಿಸೆಂಬರ್ 12, 2021 (www.justkannada.in): ‘ಕೆಜಿಎಫ್-ಚಾಪ್ಟರ್ 1’ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ.

2018ರ ಡಿಸೆಂಬರ್ 21ರಂದು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷವಾಗಿದೆ. ಅಭಿಮಾನಿಗಳು ಭಾಗ -2ರ ಬಿಡುಗಡೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಚಿತ್ರದ ಮುಂದಿನ ಭಾಗ ‘ಕೆಜಿಎಫ್-ಚಾಪ್ಟರ್ 2’ ಸಿದ್ಧವಾಗಿದ್ದು, 2022ರ ಏಪ್ರಿಲ್ 14ರಂದು ತೆರೆಕಾಣುತ್ತಿದೆ. ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ನಟನೆ ಚಿತ್ರದ ಹೈಲೈಟ್ಸ್ ಆಗಿತ್ತು.

ಬಾಲಿವುಡ್ ನಟ ಸಂಜಯ್ ದತ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಮೊದಲ ಚಾಪ್ಟರ್ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯ ಹೊಂಬಾಳೆ ಫಿಲ್ಮ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದೆ.