ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ: ಇನ್ನೂ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರ-ಕೃಷಿ ಸಚಿವ ಬಿ.ಸಿ ಪಾಟೀಲ್….

Promotion

 

ಬೆಂಗಳೂರು,ಮೇ.29,2020(www.justkannada.in): ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ.‌ ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.

ವಿಕಾಸಸೌಧದಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಬಿ.ಎಸ್ ಯಡಿಯೂರಪ್ಪ ಸಮರ್ಥ ಮುಖ್ಯಮಂತ್ರಿಯಾಗಿ ನೆರೆ ಕೊರೋನಾದಂತಹ ಎಲ್ಲಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ ಎಂದು ತಿಳಿಸಿದರು.

ಇಷ್ಟು ದಿನ ಲಾಕ್ಡೌನ್ ಇದ್ದ ಕಾರಣ ಹೊಟೇಲ್‌ಗಳೆಲ್ಲ ಮುಚ್ಚಿವೆ.ಹೀಗಾಗಿ ಆತ್ಮೀಯರ ಮನೆಯಲ್ಲಿ ಔತಣಕ್ಕೆ ಸೇರುವುದು ಸಭೆ ಆಗಲು ಹೇಗೆ ಸಾಧ್ಯ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚರ್ಚಿಸಲು ಅವಕಾಶವಿದೆ‌‌.ರಾಜ್ಯಸಭೆ ವಿಧಾನ ಪರಿಷತ್ ಚುನಾವಣೆಗಳು ಬರುತ್ತಿರುವುದರಿಂದ ಈಬಗ್ಗೆ ಸಹಜವಾಗಿ ಚರ್ಚಿಸಿರಬಹುದಷ್ಟೆ ಎಂದರು. ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ.ಆ ಬಗ್ಗೆ ತಾವು‌ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದರು.

ಕುಟುಂಬದ ಸದಸ್ಯರು  ಸಲಹೆ ಸೂಚನೆ ಕೊಡಬಹುದು.ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನರ ಕಷ್ಟನಷ್ಟದ ಬಗ್ಗೆ  ಜನಪ್ರತಿನಿಧಿಗಳಾದವರಿಗೆ ಅವರ ಕುಟುಂಬಸ್ಥರು ಗಮನಕ್ಕೆ ತರಬಹುದು ಎಂದರು.

Key words: three-year –BJP-government –secure-Agriculture Minister- BC Patil.