ಎಚ್ ಡಿ ಕೋಟೆ ತಾಲ್ಲೂಕಿನ ಮೂರು ಜಲಾಶಯಗಳು ಬಹತೇಕ ಭರ್ತಿ: ಕಪಿಲಾ ನದಿ ಪಾತ್ರದಲ್ಲಿ ಹೆಚ್ಚಾದ ಪ್ರವಾಹ ಭೀತಿ…

Promotion

ಮೈಸೂರು,ಆ,7,2020(www.justkannada.in): ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದು ಈ ನಡುವೆ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲ್ಲೂಕಿನ ಮೂರು ಜಲಾಶಯಗಳು ಬಹತೇಕ ಭರ್ತಿಯಾಗಿವೆ. ಹೀಗಾಗಿ ಮೂರು ಜಲಾಶಯಗಳಿಂದ ಮತ್ತಷ್ಟು ನೀರು ಹೊರ ಬಿಡುವ ಸಾಧ್ಯತೆ ಇದೆ.jk-logo-justkannada-logo

ಕಬಿನಿ ಹಾಗೂ ನುಗು ಜಲಾಶಯಗಳ ನೀರು ಈಗಾಗಲೇ  ಹೊರಬಿಡಲಾಗುತ್ತಿದೆ. ತಾರಾಕ ಜಲಾಶಯ ಕೂಡ ಭರ್ತಿ ಹಂತ ತಲುಪಿದ್ದು ತಾರಾಕ ಜಲಾಶಯದಿಂದಲೂ ನೀರು ಹರಿಸುವ ಸಾಧ್ಯತೆ ಇದೆ.  ನುಗು ಜಲಾಶಯದಿಂದ 6000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ತಾರಕ ಹಾಗೂ ನುಗು ಜಲಾಶಗಳಿಂದ ಹೊರಬಿಡುವ ನೀರು ಕಪಿಲಾ ನದಿ ಸೇರುವುದರಿಂದ ಕಪಿಲಾ ನದಿಯ ಹರಿವಿನ ರಭಸ ಹೆಚ್ಚಾಗುವ ಸಾಧ್ಯತೆ ಇದ್ದು ಹೀಗಾಗಿ ಪ್ರವಾಹ ಭೀತಿ ಎದುರಾಗಿದೆ.Three dam-fill- HD kote- Taluk- Flood-kapil river

ತಾರಾಕ ಜಲಾಶಯ ಕೂಡ ಭರ್ತಿ ಹಂತ ತಲುಪಿರುವ ಹಿನ್ನೆಲೆ ತಾರಕ ಜಲಾಶಯದಿಂದ ಯಾವ ಕ್ಷಣದಲ್ಲಾದರು ನೀರು ಹೊರಬಿಡಬಹುದು ನೀರಾವರಿ ನಿಗಮ ಎಂಬ ಎಚ್ಚರಿಕೆ ಸಂದೇಶ ನೀಡಿದೆ.

Key words: Three dam-fill- HD kote- Taluk- Flood-kapil river