ಟಿಎಚ್ಒ ನಾಗೇಂದ್ರ ಆತ್ಮಹತ್ಯೆ 4ನೇ ದಿನದ ಹೋರಾಟಕ್ಕೆ ಮೈಸೂರು ವೈದ್ಯರು ಸಜ್ಜು

Promotion

ಮೈಸೂರು,ಆಗಸ್ಟ್, 23, 2020 (www.justkannada.in):  ಟಿಎಚ್‌ಒ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣ. ನಾಲ್ಕನೇ ದಿನದ ಹೋರಾಟಕ್ಕೆ ಮೈಸೂರಿನ ವೈದ್ಯರು ಸಜ್ಜಾಗುತ್ತಿದ್ದಾರೆ.

 

ಮೈಸೂರು ಡಿಎಚ್‌ಒ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸೂಚನೆಗೆ ಮೈಸೂರಿನ ವೈದ್ಯ ಸಂಘದ ಸದಸ್ಯರು ಕಾಯುತ್ತಿದ್ದಾರೆ.

jk-logo-justkannada-logo

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೈಸೂರು ಸರ್ಕಾರಿ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ್ ಇತರೆ ವೈದ್ಯರ ಚರ್ಚೆ ನಡೆಸುತ್ತಿದ್ದಾರೆ.

ಡಾ.ನಾಗೇಂದ್ರ ಕುಟುಂಬ ತಟಸ್ಥ : ನಂಜನಗೂಡು ಟಿಎಚ್‌ಒ ಆತ್ಮಹತ್ಯೆ ಪ್ರಕರಣ ಸಂಬಂಧಿಸದಂತೆ ಡಾ.ನಾಗೇಂದ್ರ ಕುಟುಂಬಸ್ಥರ ತಟಸ್ಥ ನಿಲುವು ತಾಳಿದ್ದು, ನಾಗೇಂದ್ರ ಕುಟುಂಬ ಸದಸ್ಯರು ವೈದ್ಯರ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ .

ಮೊದಲ ದಿನ ಪಾರ್ಥಿವ ಶರೀರದ ಜತೆ ಇದ್ದ ನಾಗೇಂದ್ರ ಕುಟುಂಬಸ್ಥರು. ನಂತರ ಮೂರು ದಿನಗಳಿಂದಲೂ ಪ್ರತಿಭಟನಾ ಸ್ಥಳಕ್ಕೆ ಸುಳಿದಿಲ್ಲ. ವೈದ್ಯರ ಮುಷ್ಕರದ ಬಗ್ಗೆ ಯಾವುದೇ ಸ್ಪಷ್ಟ ನಿಲುವನ್ನು ಕುಟುಂಬಸ್ಥರು ತಿಳಿಸಿಲ್ಲ.

ನಗರದ ಲಲಿತ ಮಹಲ್ ಬಡಾವಣೆಯಲ್ಲಿರುವ ನಿವಾಸದಲ್ಲಿದ್ದರೂ, ನಾಗೇಂದ್ರ ಪತ್ನಿ, ತಂದೆಯಿಂದಲೂ ಯಾವುದೇ ಪ್ರತಿಕ್ರಿಯೆ ಇಲ್ಲ‌. ಯಾರನ್ನೂ ಭೇಟಿ ಮಾಡಿಲ್ಲ. ಫೋನ್ ಕರೆಗಳನ್ನು ಸ್ವೀಕರಿಸದೆ ತಟಸ್ಥವಾಗಿ ಉಳಿದಿರುವುದು ಕಂಡು ಬಂದಿದೆ.

Key words :THO-Nagendra-suicide-Mysore-doctors-outfit–4th day-fight