ಕೆಎಸ್ ಆರ್ ಟಿಸಿ ಬಸ್ ಗಳ ಮೇಲಿನ ಪ್ರೀತಿಯಿಂದ ಈ ಹುಡುಗ ಮಾಡಿದ ಕೆಲಸ ನೋಡಿದರೆ ಆಶ್ಚರ್ಯವಾಗುತ್ತದೆ

ಮೈಸೂರು,ಸೆಪ್ಟೆಂಬರ್,23,2020(www.justkannada.in)  : ಬಾಲ್ಯದಿಂದಲೂ ಬಸ್ ನೋಡುವುದು, ಬಸ್ ನಲ್ಲಿ ಪ್ರಯಾಣಿಸುವುದು ಎಂದರೆ ವಿಶೇಷ ಆಸಕ್ತಿಹೊಂದಿದ್ದ ಬಾಲಕ ಪ್ರಜ್ವಲ್ ಗೌಡ(16) ಇದೀಗ ಕೆಎಸ್ ಆರ್ ಟಿಸಿ ಬಸ್ ಮಾಡೆಲ್ ಗಳನ್ನು ಸಿದ್ಧಪಡಿಸುವ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸುವಂತಹ ಕಲಾವಿದನಾಗಿದ್ದಾನೆ.jk-logo-justkannada-logoಕೆಎಸ್ ಆರ್ ಟಿಸಿ ಬಸ್ ಗಳ ಉಳಿದೆಲ್ಲ ಅಭಿಮಾನಿಗಳಿಗಿಂತ ಪ್ರಜ್ವಲ್ ಗೌಡ ಭಿನ್ನರಾಗಿದ್ದು, ತಮಗೆ ಬಹಳ ಇಷ್ಟವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ ಟಿಸಿ) ಬಸ್ ಗಳನ್ನು ತಮ್ಮ ತನುಮನಕ್ಕೆ ತುಂಬಿಕೊಂಡವರಂತೆ ಸಾಮಾನ್ಯ ಸಾರಿಗೆ, ವೋಲ್ವೊ ಹಾಗೂ ವಾಯುವ್ಯ ಸಾರಿಗೆ ಬಸ್ ಮಾದರಿಗಳನ್ನು ರೂಪಿಸಿ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದಾನೆ.

ಮೈಸೂರು ವಿಶ್ವವಿದ್ಯಾನಿಲಯ ಕ್ವಾಟ್ರಸ್ ನಲ್ಲಿ ವಾಸವಿರುವ ಕವಿತಾ(ಕೆಎಸ್ ಒಯು ಉದ್ಯೋಗಿ), ರಾಘವೇಂದ್ರ(ವ್ಯಾಪಾರಿ) ದಂಪತಿಯ ಏಕೈಕ ಪುತ್ರನಾದ ಪ್ರಜ್ವಲ್ ಗೌಡ ಕುವೆಂಪುನಗರದಲ್ಲಿರುವ ಬಿಜಿಎಸ್ ನಲ್ಲಿ ಪಿಯುಸಿ ವ್ಯಾಸಂಗಕ್ಕೆ ಸೇರ್ಪಡೆಯಾಗಿದ್ದಾರೆ.

This-boy-made-love-KSRTC-buses-surprised-see-work

ಮಾದರಿ ಬಸ್ ಸಿದ್ಧಪಡಿಸುವುದು ಹೇಗೆ?

ಹೊಸ ವಿನ್ಯಾಸದ ಮೂಲಕ ಕೆಎಸ್ ಆರ್ ಟಿಸಿ ಗೆ ಭವಿಷ್ಯದ ಬಸ್ ಗಳ ಮಾದರಿಯ ರೂಪು ರೇಷೆಯಂತೆ ಪ್ರಜ್ವಲ್ ಅವರ ಮಾದರಿ ಬಸ್ ಗಳು ಕಾಣುತ್ತಿದೆ. ಸನ್ ಬೋರ್ಡ್ ನಿಂದ ಬಸ್ ಗಳ ಬಾಡಿ ನಿರ್ಮಿಸಿ, ಓಎಚ್ ಪಿ ಶೀಟ್ ಅನ್ನು ಬಸ್ ಹಿಂಭಾಗ, ಮುಂಭಾಗ ಹಾಗೂ ಕಿಟಕಿ ಗ್ಲಾಸ್ ಗಳನ್ನಾಗಿ ಅಳಡಿಸಲಾಗಿದೆ. ವೋಲ್ವೋ ಮಾದರಿಗೆ ಬಿಳಿ ಬಣ್ಣ ಬಳಿದು ಅದರ ಮೇಲೆ ಸ್ಟಿಕ್ಕರ್ ಅಂಟಿಸಲಾಗಿದ್ದು, ಕೆಎಸ್ ಆರ್ ಟಿಸಿ ಬಸ್ ಗಳ ಪುಟ್ಟ ಮಾದರಿಗಳು ಯಥಾವತ್ ಬಸ್ ಗಳಂತೇ ಕಾಣುವ ಮೂಲಕ ಅಚ್ಚರಿ ಮೂಡಿಸುತ್ತವೆ.

ಎರಡು ಬಸ್ ಗಳಿಗೆ ಬಣ್ಣದ ಬದಲಾಗಿ ರೇಡಿಯಂ ಬಳಸಲಾಗಿದೆ. ಚಕ್ರಗಳು, ಬಾಗಿಲುಗಳು, ಸ್ಟೇರಿಂಗ್, ಗೇರ್, ಚಾನೆಟ್ , ಸೀಟ್ ಗಳು, ಕಂಬಿಗಳು ಹೀಗೆ ಬಸ್ ನ ಒಳಾಂಗಣವು ನೈಜ ರೂಪದಲ್ಲಿದೆ. ವೋಲ್ವೊಗೆ ಎಸಿ, ಡಿಜಿಟಲ್ ಬೋರ್ಡ್, ಸ್ಕ್ರೀನ್ ಗಳನ್ನು ಹಾಕಲಾಗಿದ್ದು, ಬಸ್ ನ ಹೊರಭಾಗ ಮಾತ್ರವಲ್ಲದೇ, ಒಳಭಾಗವು ಅತ್ಯಾಕರ್ಷಕವಾಗಿ. ಒಂದು ಬಸ್ ಮಾದರಿ ನಿರ್ಮಾಣಕ್ಕೆ 20-25 ದಿನ ಸಮಯ ಹಿಡಿಯಲಿದೆ ಎಂದು ಪ್ರಜ್ವಲ್ ಜಸ್ಟ್ ಕನ್ನಡ ಕ್ಕೆ ಮಾಹಿತಿ ನೀಡಿದರು.

ಅಭಿಮಾನವು ಕಲಾವಿದನನ್ನಾಗಿಸಿದೆ

ಬಸ್ ಮೇಲಿನ ಅಭಿಮಾನವು ಪ್ರಜ್ವಲ್ ನನ್ನು ಕಲಾವಿದನನ್ನಾಗಿ ಮಾಡಿದೆ.  ಲಾಕ್ ಡೌನ್ ಸಂದರ್ಭ ತನ್ನ ಕನಸಿಗೆ ರೆಕ್ಕೆ ಬಂದಂತೆ ಮೊದಲು ರಟ್ಟಿನ ಬಾಕ್ಸ್ ಬಳಸಿ, ಬಸ್ ಮಾದರಿ ನಿರ್ಮಿಸಲಾಗಿದೆ. ಇದು ಬಹಳ ಚನ್ನಾಗಿ ಮೂಡಿಬಂದಿದ್ದು, ಪೋಷಕರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ನಂತರ ಸೆನ್ ಬೋಡರ್ಸ್ ಬಳಸಿ ಬಸ್ ತಯಾರಿಸಲಾಗಿದೆ. ಹೀಗೆ ಸಿದ್ಧಪಡಿಸಲಾದ ಬಸ್ ಅನ್ನು ಮೈಸೂರು ಕೆಎಸ್ ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರಿಗೆ ನೀಡಿದ್ದಾಗಿ ಪ್ರಜ್ವಲ್ ಸಂತೋಷವ್ಯಕ್ತಪಡಿಸಿದರು.

ನಾಲ್ಕನೇ  ಬಸ್  ಸಿದ್ಧವಾಗುತ್ತಿದೆ

ಈಗಾಗಲೇ ಕೆಎಸ್ ಆರ್ ಟಿಸಿಯ ಕೆಂಪು ಬಸ್, ಐರಾವತ, ಗ್ರೀನ್ ಕಲರ್ ಬಸ್ ಸೇರಿದಂತೆ ಮೂರು ಬಸ್ ಗಳನ್ನು ಈಗಾಗಲೇ ಸಿದ್ಧಪಡಿಸಿದ್ದು, ಮತ್ತೊಂದು ಬಸ್ ಸಿದ್ಧವಾಗುತ್ತಿದೆ. ಒಂದು ಬಸ್ ರಚನೆಗೆ 5 ರಿಂದ 6 ಸಾವಿರ ವೆಚ್ಚವಾಗಲಿದೆ. ಇದುವರೆವಿಗೆ 15 ರಿಂದ 16 ಸಾವಿರ ಖರ್ಚು ಮಾಡಲಾಗಿದೆ. ಪ್ರತಿ ಬಸ್ ನಿರ್ಮಾಣವು ನನಗೆ ಬಹಳ ಖುಷಿ ನೀಡಿದೆ ಎಂದು ಪ್ರಜ್ವಲ್ ತಿಳಿಸಿದರು.

ಕೆಎಸ್ ಆರ್ ಟಿಸಿ ಇಲಾಖೆ ಸೇರುವ ಕನಸು

ಕೆಎಸ್ ಆರ್ ಟಿಸಿ ಬಸ್ ಗಳೆಂದರೆ ವಿಶೇಷ ಆಸಕ್ತಿ ಹೊಂದಿರುವ ಪ್ರಜ್ವಲ್ ಉನ್ನತ ವ್ಯಾಸಂಗದ ಬಳಿಕ ಕೆಎಸ್ ಆರ್ ಟಿಸಿ  ಇಲಾಖೆಯಲ್ಲಿಯೇ ಉದ್ಯೋಗ ಪಡೆದು ಉತ್ತಮ ಸೇವೆ ಸಲ್ಲಿಸುವ ಕನಸು ಹೊಂದಿದ್ದಾರೆ. ಬಸ್ ಸ್ವಚ್ಛತೆ, ಅಪಘಾತ ಸಂದರ್ಭ ಬಸ್ ರಕ್ಷಣೆಗೆ ಹೇಗೆ ಮಾಡಬೇಕು ಸೇರಿದಂತೆ ಲಾಂಗ್ ಡ್ರೈವ್ ತೆರಳುವಂತಹ ಬಸ್ ಗಳಿಗೆ ಶೌಚಾಲಯ ಅಳವಡಿಕೆ ಮಾಡಬೇಕು ಎಂಬಿತ್ಯಾದಿಯಾದ ಸಲಹೆಗಳನ್ನು ತಿಳಿಸುವ ಕಾರ್ಯಕ್ಕೆ ಪ್ರಜ್ವಲ್ ಮುಂದಾಗಿದ್ದಾರೆ.

key words : This-boy-made-love-KSRTC-buses-surprised-see-work