ನಿಫಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಆತಂಕ ಪಡುವ ಅಗತ್ಯವಿಲ್ಲ- ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಸ್ಪಷ್ಟನೆ..

ಮೈಸೂರು,ಜೂ,7,2019(www.justkannada.in):  ಕೇರಳದಲ್ಲಿ ನಿಫಾ ವೈರೆಸ್ ಆತಂಕ ಹಿನ್ನಲೆ, ಮೈಸೂರು ಜಿಲ್ಲೆಯಲ್ಲಿ ಇದುವರೆಗೂ ನಿಫಾ ವೈರೆಸ್ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬೇಕಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಡಾ. ವೆಂಕಟೇಶ್. ಇದುವರೆಗೆ ಯಾರೋಬ್ಬರನ್ನು ಸೋಂಕು ಕಾಣಿಸಿಕೊಂಡಿರುವ ಶಂಕಿತರು ಎಂದು ಗುರುತಿಸಿಲ್ಲ.ಅದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬೇಕಿಲ್ಲ. ಮೈಸೂರು ಪ್ರವಾಸೋದ್ಯಮ ತಾಣ ಕೇರಳ ರಾಜ್ಯದಿಂದ ಬರುವ ಪ್ರವಾಸಿಗರ ಮೇಲೆ ಹೆಚ್ಚಿನ ಗಮನ ಇಡಲಾಗುವುದು. ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಹೆಚ್ವಿನ ಸ್ಥಳಗಳಲ್ಲಿ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿವುದು. ನಿಫಾ ವೈರಸ್ ಲಕ್ಷಣಗಳು ಇರುವ ಪ್ರವಾಸಿಗರು ಜಿಲ್ಲಾಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ಇನ್ನು ಎಲ್ಲಾ ಬಾವಲಿಗಳಿಂದ ಈ ರೋಗ ಬರಲ್ಲ. ಕೆಲವು ಸೋಂಕು ಇರುವ ಬಾವಲಿಗಳಿಂದ ಸೋಂಕು ಬರಲಿದೆ. ಬೆನ್ನಿನಿಂದ ನೀರನ್ನು ತೆಗೆದ ಸ್ಯಾಂಪಲ್ಸ್ ಗಳನ್ನ NIV  ಲ್ಯಾಬ್ ಪುಣೆಗೆ ಕಳಿಸಲಾಗುವುದು. ಸದ್ಯ ಮೈಸೂರು ಜಿಲ್ಲೆಯಲ್ಲಿ ನಿಫಾ ಬಗ್ಗೆ ಯಾವುದೇ ತೊಂದರೆ ಇಲ್ಲ.  ನಿಫಾ ವೈರಸ್ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ  ಅವರಿಂದ ಅಧಿಕೃತ ಘೋಷಣೆ ಮಾಡುತ್ತೇವೆ. ಇಲ್ಲಾ ಅಂದ್ರೇ ಯಾವುದೇ ಮಾಹಿತಿ ನಂಬಬೇಡಿ ಎಂದು ಸೂಚನೆ ನೀಡಿದರು.

ಕೇರಳದಿಂದ ಬರುವವರು ನಿಮಗೆ ರೋಗದ ಸೋಂಕು ಬಗ್ಗೆ ಚಿಕಿತ್ಸೆ ಪಡೆದುಕೊಳ್ಳಬಹುದು. ಸೋಮವಾರದಿಂದ ಸೋಂಕಿನ ಕುರಿತು ಜಾಗೃತ ಮೂಡಿಸಲಾಗುವುದು. ಸದ್ಯ ಹೆಚ್.ಡಿ. ಕೋಟೆ ಭಾಗದಲ್ಲಿ ಜ್ವಾರ ಹಾಗೂ ತಲೆ ನೋವು ಶೀತ ಇತ್ಯಾದಿಗಳನ್ನು ಇರುವವರ ಮೇಲೆ ಈಗ ನಿಗಾ ವಹಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.

Key words: There is no need to worry about the Nifa virus in the district-Mysore district health and family welfare officer Dr. Venkatesh clarifies.

#Nifavirus #Mysore  #district #healthfamilywelfare #officer #DrVenkatesh