ಸಂಕ್ರಾಂತಿಗೂ ಥಿಯೇಟರ್ ಗಳಲ್ಲಿ ಸಿನಿಮಾ ಪ್ರದರ್ಶನ ಇಲ್ಲ

Promotion

ಬೆಂಗಳೂರು, ಜನವರಿ 04, 2020 (www.justkannada.in): ಸಂಕ್ರಾಂತಿ ಹಬ್ಬಕ್ಕೂ ಥಿಯೇಟರ್ ಗಳಲ್ಲಿ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ.

ಹೌದು. ಬಿಡುಗಡೆಗೆ ಸಿದ್ಧವಾಗಿರುವ ಚಲನಚಿತ್ರಗಳ ಪಟ್ಟಿಯನ್ನು ಒದಗಿಸಿದರೆ ಮಾತ್ರ ಚಿತ್ರಮಂದಿರಗಳನ್ನು ಮತ್ತೆ ತೆರೆಯುತ್ತೇವೆ ಎಂದು ಚಲನಚಿತ್ರ ಪ್ರದರ್ಶಕರು ಹೇಳಿದ್ದಾರೆ.

ಶೇ. 100ರಷ್ಟು ಸೀಟುಗಳನ್ನು ಭರ್ತಿ ಮಾಡಬೇಕು ಎಂಬ ವಾದವನ್ನು ಮಂಡಿಸುತ್ತಾರೆ ಚಿತ್ರರಂಗದ ಮಂದಿ. ಇಲ್ಲದಿದ್ದರೆ ಥಿಯೇಟರ್ ಮತ್ತೆ ಓಪನ್ ಮಾಡಲ್ಲ ಎಂದು ಹೇಳುತ್ತಿದ್ದಾರೆ.

ಈ ನಡುವೆ ಒಂದಷ್ಟು ಸಿನಿಮಾಗಳನ್ನು ರಿಲೀಸ್‌ ಮಾಡಲು ಕನ್ನಡದ ನಿರ್ಮಾಪಕರು ರೆಡಿಯಾಗಿದ್ದಾರೆ. ಆದರೆ ಅದು ಸಂಕ್ರಾಂತಿ ವೇಳೆಗೆ ಸಾಧ್ಯವಿಲ್ಲ.