ಮೈಸೂರು: ಎಪಿಎಂಸಿಯಲ್ಲಿ ಹತ್ತು ಮಳಿಗೆಗಳಲ್ಲಿ ಕೈ ಚಳಕ ತೋರಿದ ಖದೀಮರು….   

Promotion

ಮೈಸೂರು,ಜು,3,2019(www.justkannada.in): ಮೈಸೂರಿನಲ್ಲಿ ಕಳ್ಳತನ ಕೃತ್ಯ ತಕ್ಕಮಟ್ಟಿಗೆ ಕಡಿಮೆಯಾಗಿದೆ ಎಂದುಕೊಳ್ಳುತ್ತಿರುವಾಗಲೇ ಕಳ್ಳರು ಮತ್ತೆ ಕೈಚಳಕ ತೋರಿದ್ದಾರೆ. ಮೈಸೂರು-ಊಟಿ ರಸ್ತೆಯಲ್ಲಿರುವ ಎಪಿಎಂಸಿಯ ಹತ್ತು ಮಳಿಗೆಗಳಲ್ಲಿ ಖದೀಮರು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಕಳೆದ ರಾತ್ರಿ  ಕಳ್ಳರು ಈ ಕೃತ್ಯವೆಸಗಿದ್ದಾರೆ. ಎಪಿಎಂಸಿ ಬಳಿಯಿದ್ದ ಹತ್ತು ಅಂಗಡಿಗಳ ಶೆಟರ್ ಮುರಿದು ಒಳನುಗ್ಗಿದ ಕಳ್ಳರು  20ಸಾವಿರ ಕ್ಕೂ ಅಧಿಕ ನಗದು ಹಣ ಮತ್ತು ಸ್ವತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಅನ್ ಲೋಡಿಂಗ್ ಮತ್ತು ಲೋಡಿಂಗ್ ಗೆ ಲಾರಿಗಳು ಬಂದಾಗ ವಿಷಯ ಗಮನಕ್ಕೆ ಬಂದಿದೆ.

ಲಾರಿ ಚಾಲಕರು ಕೂಡಲೇ ಮಾಹಿತಿ ನೀಡಿದ್ದು, ಮೈಸೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಗ್ರಾಮಾಂತರ ಠಾಣೆಯ ಸಬ್ ಇನ್ಸಪೆಕ್ಟರ್ ಜಯಪ್ರಕಾಶ್ ಮತ್ತು ಸಿಬ್ಬಂದಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words: Theft – ten stores – Mysore- APMC