ರಂಗಭೂಮಿ ಕಲಾವಿದ, ಹಿರಿಯ ನಟ ರಾಜಾರಾಮ್ ನಿಧನ

Promotion

ಬೆಂಗಳೂರು, ಮೇ 11, 2021 (www.justkannada.in): ರಂಗಭೂಮಿ ಕಲಾವಿದ, ಹಿರಿಯ ನಟ ಆರ್‌ ಎಸ್ ರಾಜಾರಾಮ್ (84) ನಿಧನರಾಗಿದ್ದಾರೆ.

ಗಾಳಿಪಟ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ರಾಜಾರಾಂ ಅವರು ಹಲವಾರು ರಂಗಪ್ರಯೋಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರು. ರಾಜಾರಾಮ್ ಅವರ ನಿಧನಕ್ಕೆ ನಟ ಸೃಜನ್ ಲೋಕೇಶ್ ಸಂತಾಪ ಸೂಚಿಸಿದ್ದಾರೆ.

ಆರ್ ಎಸ್ ರಾಜಾರಾಮ್ ಅವರು 1938ರ ಜುಲೈ 10ರಂದು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ನಲ್ಲಿ ಜನಿಸಿದರು. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ರಾಜಾರಾಮ್ ಮಲ್ಲೇಶ್ವರದ ಸ್ನೇಹಿತರೊಡನೆ ‘ರಸಿಕ ರಂಜನಿ ಕಲಾವಿದರು’ ಸ್ಥಾಪಿಸಿದರು. ಜತೆಗೆ ಗಾಳಿಪಟ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.