ರಜೆ ವಿಚಾರ: ಸರ್ಕಾರಿ ನೌಕರರಿಗೆ  ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ…   

Promotion

ಬೆಂಗಳೂರು,ಜೂ,6,2019(www.justkannada.in): ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು,  ಜಯಂತಿ ಆಚರಣೆಗೆ ನೀಡುವ ರಜೆ ಮುಂದುವರಿಕೆ ಮತ್ತು ನಾಲ್ಕನೇ ಶನಿವಾರ ರಜೆ ನೀಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ  ಒಪ್ಪಿಗೆ ನೀಡಲಾಗಿದೆ. ಕನಕ ಜಯಂತಿ, ಬಸವಜಯಂತಿ, ವಾಲ್ಮಿಕಿ ಜಯಂತಿಗೆ ರಜೆ ಮುಂದುವರೆಸುವುದು ಮತ್ತು ನಾಲ್ಕನೇ ಶನಿವಾರ ರಜೆ ನೀಡುವ ನಿರ್ಧಾರಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದ್ದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಹಿಯೊಂದು ಬಾಕಿ ಇದೆ.

ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿಗಳ ರಜೆಯನ್ನ ರದ್ದು ಮಾಡುವಂತೆ ವೇತನ ಆಯೋಗ ಶಿಫಾರಸ್ಸು ಮಾಡಿತ್ತು. ಹೀಗಾಗಿ ರಾಜ್ಯ ಸರ್ಕಾರ ರಜೆಯನ್ನ ರದ್ದು ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ ಈಗ ವಿವಿಧ ಜಯಂತಿಗಳಿಗೆ ನೀಡುವ ರಜೆಯನ್ನ  ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Keywords: The state government has given  good news to government employees

#stategovernment #goodnews #governmentemployees