ಫೇಸ್’ಬುಕ್ ನಲ್ಲಿ ‘ಫ್ರೆಂಚ್ ಬಿರಿಯಾನಿ’ ಹಂಚಿದ ವ್ಯಕ್ತಿ !

Promotion

ಬೆಂಗಳೂರು, ಜುಲೈ 29, 2020 (www.justkannada.in): ವ್ಯಕ್ತಿಯೊಬ್ಬರು ‘ಫ್ರೆಂಚ್ ಬಿರಿಯಾನಿ’ ಚಿತ್ರವನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದ್ದಾರೆ!

ಇದು ಗಮನಕ್ಕೆ ಬರುತ್ತಲೇ ತಕ್ಷಣವೇ ಆ ವ್ಯಕ್ತಿಯನ್ನು ಸಂಪರ್ಕಿಸಿದ ಚಿತ್ರತಂಡ ಇದನ್ನು ತೆಗೆಸಿ ಹಾಕಿದೆ. ಅಂದಹಾಗೆ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಂಡ ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ ನಿರ್ಮಾಣದ ‘ಫ್ರೆಂಚ್ ಬಿರಿಯಾನಿ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ ನಿರ್ಮಾಣದ ‘ಫ್ರೆಂಚ್ ಬಿರಿಯಾನಿ’ ಚಿತ್ರದ ಕುರಿತು ಸಿನಿ ಪ್ರಿಯರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.