ರಣಜಿ ಟ್ರೋಫಿಯ ಸೆಮಿಫೈನಲ್ಸ್ ಗಳಲ್ಲಿ ಡಿಆರ್ ಎಸ್ ಬಳಕೆಗೆ ಅವಕಾಶ ನೀಡಿದ ಬಿಸಿಸಿಐ

Promotion

ನವದೆಹಲಿ, ಫೆಬ್ರವರಿ 25, 2020 (www.justkannada.in): ರಣಜಿ ಟ್ರೋಫಿಯ ಸೆಮಿಫೈನಲ್ಸ್ ಮತ್ತು ಅಂತಿಮ ಪಂದ್ಯಗಳಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಮೇಲ್ಮನವಿ ಸಲ್ಲಿಸುವ(ಡಿಆರ್‌ಎಸ್) ಅವಕಾಶವನ್ನು ಮೊದಲ ಬಾರಿಗೆ ಬಳಸಲಾಗುತ್ತದೆ.

ರಣಜಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಟಗಾರರು ಡಿಆರ್‌ಎಸ್ ಅನ್ನು ಸೆಮಿಫೈನಲ್ಸ್ ಮತ್ತು ಅಂತಿಮ ಪಂದ್ಯಗಳಲ್ಲಿ ಬಳಸಲು ಬಿಸಿಸಿಐ ಅವಕಾಶ ನೀಡಿದೆ.

ರಣಜಿ ಟ್ರೋಫಿಯ ಸೆಮಿಫೈನಲ್ಸ್ ಪಂದ್ಯಗಳು ಫೆಬ್ರವರಿ 29 ರಿಂದ ನಡೆಯಲಿವೆ. ಸೌರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ-ಬಂಗಾಳ ನಡುವೆ ಸೆಮಿಫೈಲ್ಸ್ ಪಂದ್ಯಗಳು ನಡೆಯಲಿವೆ. ಮಾರ್ಚ್ 9 ರಿಂದ ಫೈನಲ್ ಪಂದ್ಯ ನಡೆಯಲಿದೆ.