ಕೆಲ ಪೈರಸಿ ವೆಬ್’ಸೈಟ್ ಗಳಲ್ಲಿ ‘ತಲೈವಿ’ ಲೀಕ್! ನಿರ್ಮಾಪಕರಿಗೆ ತಲೆನೋವು ತಂದ ಆನ್’ಲೈನ್ ಖದೀಮರು

Promotion

ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಕುರಿತಾದ ಚಿತ್ರ ತಲೈವಿ ಕೊನೆಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ನಟಿ ಕಂಗನಾ ರನೌತ್ ಅಭಿನಯದ ತಲೈವಿ ಚಿತ್ರದ ಕೆಲ ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ.

ತಮಿಳ್ರೊಕರ್ಜ್, ಮೊವಿರುಲ್ಜ್, ಟೆಲಿಗ್ರಾಂ ನಂತಹ ವಿವಿಧ ಪೈರಸಿ ವೆಬ್‌ಸೈಟ್‌ಗಳಲ್ಲಿ ಈ ಚಲನಚಿತ್ರವು ಉಚಿತ ಸ್ಟ್ರೀಮಿಂಗ್‌ಗೆ ಲಭ್ಯವಿದೆ ಎನ್ನಲಾಗಿದೆ.

ಬ್ಲಾಕ್‌ಬಸ್ಟರ್‌ಗಳು ಬಿಡುಗಡೆಯಾದ ಕೆಲವು ಗಂಟೆಗಳ ನಂತರ ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತಿವೆ. ಇದು ನಿರ್ಮಾಪಕರ ತಲೆನೋವಿಗೆ ಕಾರಣವಾಗಿದೆ. ಅಂದಹಾಗೆ ‘ತಲೈವಿ’ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿಯೂ ಬಿಡುಗಡೆಯಾಗಿದೆ.

key words: ‘Thalaivi’ leak on some piracy websites!