ಅಲ್ಪಸಂಖ್ಯಾತರ ಓಲೈಕೆಗೆ ಪಠ್ಯ ಬದಲಿಸಿದ್ರು: ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ- ಸಚಿವ ಆರ್.ಅಶೋಕ್ ವಾಗ್ದಾಳಿ.

ಬೆಂಗಳೂರು,ಜೂನ್,23,2022(www.justkannada.in):  ಪಠ್ಯ ಪರಿಷ್ಕರಣೆ ವಿವಾದ ಕುರಿತ ಚರ್ಚೆ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು ಈ ಸಂಬಂಧ ಕಾಂಗ್ರೆಸ್ ಮತ್ತು ಬರಗೂರು ರಾಮಚಂದ್ರಪ್ಪ ಸಮಿತಿ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಪಠ್ಯ ಪರಿಷ್ಕರಣೆ ವಿಚಾರವಾಗಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, . ಪಠ್ಯದ ಬಗ್ಗೆ ಇಷ್ಟು ಚರ್ಚೆಯಾಗುತ್ತಿರುವುದು ಇತಿಹಾಸದಲ್ಲೇ ಮೊದಲು. ಹಿಂದೆ ಸರ್ಕಾರಗಳು ಕೆಲ ಪಠ್ಯಗಳನ್ನ ತೆಗೆದು ಹಾಕಿವೆ.  ಇವರಿಗೆ ರಾಮ ಈಶ್ವರ ಹೆಸರು ಕೇಳಲು ಇಷ್ಟವಿಲ್ಲ. ಅಲ್ಪಸಂಖ್ಯಾತರ ಓಲೈಕೆಗೆ ಪಠ್ಯ ಬದಲಿಸಿದ್ರು. ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ ಎಂದು ಕಿಡಿಕಾರಿದರು.

ನಮ್ಮ ಸರ್ಕಾರ ಇದ್ದಾಗ ಕುವೆಂಪು ಅವರ 8 ಪಾಠ ಸೇರಿಸಿದ್ದೇವೆ.  ಆದರೆ ಕಾಂಗ್ರೆಸ್  ಅಲ್ಪ ಸಂಖ್ಯಾತರ ಓಲೈಕೆ ಮಾಡಲೆಂದೇ ಪಠ್ಯ ಬದಲಿಸಿದ್ದರು.  ಕಾಂಗ್ರೆಸ್ ಸರ್ಕಾರದಲ್ಲಿ ತಮಗೆ ಬೇಕಾದನ್ನ ತುರುಕಲಾಗಿತ್ತು. ಕುವೆಂಪು ಪದ್ಯ ತೆಗೆದು ಹಂಸಲೇಖ ಪದ್ಯ ಸೇರಿಸಿದ್ರು .ಕುವೆಂಪು ಪಠ್ಯ ಕೈ ಬಿಟ್ಟಾಗ ಧರಣಿ ಮಾಡಲಿಲ್ಲ. ಕೆಂಪೇಗೌಡನ ಕನಸು ಎಂಬ ಅಧ್ಯಯನ ಸೇರ್ಪಡೆ  ಮಾಡಿದ್ದೇವೆ. ಆದರೆ ಕಾಂಗ್ರೆಸ್ ಕೆಂಪೇಗೌಡರ ಪಠ್ಯ ಯಾಕೆ ಸೇರಿಸಲಿಲ್ಲ ಎಂದು ಆರ್.ಅಶೋಕ್ ಹರಿಹಾಯ್ದರು.

ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ. ಟಿಪ್ಪು ಅಂದ್ರೆ ಸಿದ್ದರಾಮಯ್ಯಗೆ ಮೈಮೇಲೆ ದೇವರು ಬರುತ್ತೆ.   ಟಿಪ್ಪು ವೈಭವೀಕರಿಸಿ ಮೈಸೂರು ರಾಜರನ್ನ ಕಡೆಗಣಿಸಿದ್ದರು. ಟಿಪ್ಪು ಬ್ರಿಟೀಷರ ವಿರುದ್ದ ಹೋರಾಡಿದ್ದು ಬಿಟ್ಟು ಬೇರೇನು ಮಾಡಿಲ್ಲ., ಅನೇಕರನ್ನ ಮತಾಂತರ ಮಾಡಿದ ಎಂದು ಆರ್.ಅಶೋಕ್ ಹೇಳಿದರು.

ನಮ್ಮ ಬಾವುಟ ಮತ್ತು ಚೆಲುವ ಕನ್ನಡ ನಾಡಿದು ಪಠ್ಯಕ್ಕೆ ಕತ್ತರಿ ಹಾಕಿದ್ರು. ವಿಜಯನಗರ ಸಾಮ್ರಾಜ್ಯ ಪಠ್ಯ ತೆಗೆದರು. ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು.

Key words: text -changed – Congress – no respect – Minister-R. Ashok.

ENGLISH SUMMARY…

Cong. revised textbook content to please minorities: They don’t have respect for the land: Minister R. Ashok

Bengaluru, June 23, 2022 (www.justkannada.in): Revenue Minister R. Ashok today said that the Congress party had revised the school text books during its time in order to please minorities.

Addressing a press meet today in Bengaluru, R. Ashok expressed his view that, it is for the first time in the history of the State revision of school text books is being debated so much. “Earlier governments have also removed lessons. They don’t like to listen to the names of Rama, Shiva. They revised the text books only to please the minorities. They don’t have any respect for the land or people,” he alleged.

“During our tenure we have included 8 lessons of Kuvempu. But the Congress had revised the textbooks only to please the minorities. They had included only what they want. They removed Kuvempu’s poems and included Hamsalekha’s poem. Nobody protested when Kuvempu’s text was removed. We have included a lesson on Kempegowda. Why didn’t they do it?,” he questioned.
“Congress leaders don’t have any respect for the land and Hindus. Siddaramaiah loses temper if he listens to the word Tipu. They had glorified Tipu and had shown the Mysuru kings in low light. Tipu has not done anything other than fighting against the Birtish. He had converted many people,” he said.

Keywords: Revenue Minister R. Ashok/ school textbook/ revision/ Congress/ minorities