ಪಠ್ಯದಲ್ಲಿ ಬೌದ್ದ ಹಾಗೂ ಜೈನ ಧರ್ಮದ ಇತಿಹಾಸ ಕೈಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು,ಫೆಬ್ರವರಿ,22,2021(www.justkannada.in) : ಶಾಲಾ ಪಠ್ಯದಲ್ಲಿ ಬೌದ್ದ ಹಾಗೂ ಜೈನ ಧರ್ಮದ ಇತಿಹಾಸದ ಅಂಶಗಳನ್ನ ತೆಗೆದಿರುವುದನ್ನ ವಿರೋಧಿಸಿ ವಿಶ್ವ ಬುದ್ದ ವಿಹಾರ ವೇದಿಕೆ ಹಾಗೂ ಪ್ರಗತಿಪರರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

jkನಗರದ ಬುದ್ದವಿಹಾರ ಮುಂಭಾಗ ಜಮಾವಣೆಗೊಂಡ ಪ್ರತಿಭಟನಕಾರರು ಕೂಡಲೇ ಪಠ್ಯಪುಸ್ತಕದಲ್ಲಿ ಬೌದ್ದ ಹಾಗೂ ಜೈನ ಧರ್ಮದ ಇತಿಹಾಸ ಸೇರುವಂತೆ ಒತ್ತಾಯಿಸಿ, ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

text-Buddhist-Jaina-religion-History-Abandoned-Condemnation-Protest

ದ್ರಾವಿಡ ನಾಡಲ್ಲಿ ನೆಲೆಯೂರಿದ್ದ ಅತ್ಯುತ್ತಮ ಧರ್ಮಗಳಲ್ಲಿ ಬೌದ್ದ ಮತ್ತು ಜೈನ ಧರ್ಮ ಸೇರಿವೆ. ಜೈನ, ಬೌದ್ದ ಧರ್ಮದ ಇತಿಹಾಸವನ್ನ ಪಠ್ಯಪುಸ್ತಕದಲ್ಲಿ ತೆಗೆದಿರುವುದು ಸರಿಯಲ್ಲ. ಸರ್ಕಾರ ಈ ಹಿಂದೆಯಂತೆ ಪಠ್ಯಪುಸ್ತಕದಲ್ಲಿ ಬೌದ್ದ ಮತ್ತು ಜೈನಧರ್ಮದ ಇತಿಹಾಸ ಸೇರಿಸಬೇಕು ಎಂದು ಆಗ್ರಹಿಸಿದರು.

key words : text-Buddhist-Jaina-religion-History-Abandoned-Condemnation-
Protest