ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು…

Promotion

ಯಾದಗಿರಿ,ಏಪ್ರಿಲ್,21,2021(www.justkannada.in): ಟಂಟಂ-ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.jk

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಅಯ್ಯಮ್ಮ(60), ಶರಣಮ್ಮ(40), ಕಾಸಿಂ ಬಿ(40), ಭೀಮಾಬಾಯಿ(40) ಹಾಗೂ ದೇವಿಂದ್ರಮ್ಮ ಮೃತಪಟ್ಟವರು ಎಂದು ಗುರುತಿಸಲಾಗಿದೆ. terrible- accident- Five- deaths -on the spot-yadgir

ಮೃತರು ವಡಗೇರಿ ತಾಲೂಕಿನ ಮನಮುಟಗಿ ಗ್ರಾಮದವರು ಎನ್ನಲಾಗಿದ್ದು, ಟಂಟಂನಲ್ಲಿದ್ದ  ಐವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  terrible- accident- Five- deaths -on the spot-yadgir