ಬೆಂಗಳೂರಿನಲ್ಲಿ ಭೀಕರ ಅಪಘಾತ: ಶಾಸಕರೊಬ್ಬರ ಪುತ್ರ ಸೇರಿ 7 ಮಂದಿ ಸಾವು.

Promotion

ಬೆಂಗಳೂರು, ಆಗಸ್ಟ್ 31,2021(www.justkannada.in):  ಬೆಂಗಳೂರಿನಲ್ಲಿ ತಡರಾತ್ರಿ  ಭೀಕರ ಅಪಘಾತ ಸಂಭವಿಸಿ ಶಾಸಕರೊಬ್ಬರ ಪುತ್ರ ಸೇರಿ 7 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಸಮೀಪ ಮುಂಜಾನೆ 1.45ರ  ವೇಳೆ ಈ ಘಟನೆ ನಡೆದಿದೆ. ಹೊಸೂರು ಡಿಎಂಕೆ ಶಾಸಕ ವೈ. ಪ್ರಕಾಶ್ ಪುತ್ರ ಕರುಣಾಸಾಗರ್ (28), ಬಿಂದು (28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ (21), ಡಾ.ಧನುಶಾ (21) ಮತ್ತು ಹುಬ್ಬಳ್ಳಿಯ ರೋಹಿತ್ (23) ಮತ್ತು ಹರ್ಯಾಣದ ಉತ್ಸವ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಫುಟ್‌ ಪಾತ್ ಹತ್ತಿ ಡಿವೈಡರ್‌ ಗೆ ಡಿಕ್ಕಿಯಾಗಿ ನಂತರ ಪಕ್ಕದ ಗೋಡೆಗೆ ಗುದ್ದಿದೆ.ಇನ್ನು ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ 6 ಜನರು ಸ್ಥಳದಲ್ಲಿಯೇ ಮೃತಪಟ್ಟರೇ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರುಣಾಸಾಗರ್  ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಖರೀದಿ ಮಾಡಲು ಸೋಮವಾರ ಸಂಜೆ 5.30ರ ಸುಮಾರಿಗೆ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಮನೆಯವರು ಕರೆ ಮಾಡಿ ಊಟಕ್ಕೆ ಬರುತ್ತೀಯಾ ಎಂದು ವಿಚಾರಿಸಿದ್ದರು. ಆಗ ಬರುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.

ENGLISH SUMMARY…

Seven including a MLAs son dies in gruesome road accident in Bengaluru
Bengaluru, August 31, 2021 (www.justkannada.in): In a gruesome road accident that took place in Bengaluru City, seven people, including the son of an MLA lost their lives.
The accident took place at 1.45 am near the Mangala Kalyana Mantapa in Koramangala. The deceased are identified as Hosur DMK MLA Y. Prakash’s son Karunasagar (28); Bindu (28); Akshay Goyal, Ishita (21) from Kerala, Dr. Dhanusha (21) and Rohith (23) from Hubballi and Utsav, from Haryana.
The driver of the ill-fated car lost control over the vehicle and jumped over the footpath, divider and hit a wall. The front portion of the car is crushed beyond recognition due to the impact of the accident. Out of the total 7 people who were traveling in the car, 6 of them died on the spot and the other person died at the hospital. The footage of the accident is recorded on CCTV.
It is learnt that the MLA’s son Karunasagar had come to Bengaluru on Monday evening around 5.30 pm to purchase some building construction material. His family members had called him to enquire whether he would join them for dinner at home, and he had replied that he wouldn’t come.
Keywords: Gruesome accident/ Bengaluru/ Seven people dead

Key words:  terrible accident – Bangalore-Seven –death-including- son of MLA