“ತಾತ್ಕಾಲಿಕ SSLC ಪರೀಕ್ಷೆ ವೇಳಾಪಟ್ಟಿ: ತಕರಾರು ಅರ್ಜಿ ಸಲ್ಲಿಕೆಗೆ ಅವಕಾಶ – ಸಚಿವ ಎಸ್.ಸುರೇಶ್ ಕುಮಾರ್

ಮೈಸೂರು,ಫೆಬ್ರವರಿ,13,2021(www.justkannada.in) : ತಾತ್ಕಾಲಿಕ ವಾಗಿ  ಎಸ್.ಎಸ್.ಎಲ್.ಸಿ ಪರೀಕ್ಷೆಯ  ವೇಳಾ ಪಟ್ಟಿ ಪ್ರಕಟಿಸಿದ್ದು, ಪೋಷಕರು ಫೆ,24 ರೊಳಗೆ ತಕರಾರು ಅರ್ಜಿ ಹಾಕಿದರೆ ದಿನಾಂಕ ನಿಗದಿ ಬಗ್ಗೆ  ನಮ್ಮ‌ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.ಕೆ.ಆರ್.ನಗರ ತಾಲೂಕಿನ ಶೀಗವಾಳು ಗ್ರಾಮದಲ್ಲಿ ಬೆಂಗಳೂರು,ನಾಗರಾಬಾವಿ ಬಡಾವಣೆಯ ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪಠ್ಯ ಪುಸ್ತಕ ವಿಷಯ ಆಧಾರಿತ ಟ್ಯಾಬ್ ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಲಾ ಕಾಲೇಜು ಆರಂಭ ಗೊಂಡಿದ್ದು, ಯಾವುದೇ ಸಮಸ್ಯೆಗಳು ಎದುರಾಗದಂತೆ ಶಿಕ್ಷಣ ಇಲಾಖೆ‌ ಮೂಲಕ  ಜಾಗೃತಿ ಮೂಡಿಸಿದ್ದೇವೆ. ಎಲ್ಲೆಲ್ಲಿ ಬಸ್ ಗಳ ಕೊರತೆ ಇದೆ ಅಂತಹ ಕಡೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.Temporary-SSLC-Test schedule-Dispute-submission-application-Opportunity-Minister S.Suresh Kumarಮೆಟ್ರಿಕ್ ಪೂರ್ವ ಹಾಸ್ಟಲ್ ಗಳಲ್ಲಿ ಕೋವೀಡ್ ಬಗ್ಗೆ ನಿತ್ಯ ಜಾಗೃತಿ ವಹಿಸಲು ಸೂಚನೆ‌ ನೀಡಿದ್ದೇನೆ. ಅದೇ  ರೀತಿಯಲ್ಲಿ ಸಹ ಪಿಯುಸಿ ಪರೀಕ್ಷೆ ವೇಳಾ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್ ಇತರರು ಹಾಜರಿದ್ದರು.

key words : Temporary-SSLC-Test schedule-Dispute-submission-application-Opportunity-Minister S.Suresh Kumar