ಮಧ್ಯಪ್ರದೇಶ ಸಿಎಂ ಕಮಲನಾಥ್ ಗೆ ತಾತ್ಕಾಲಿಕ ರಿಲೀಫ್: ವಿಧಾನಸಭೆ ಕಲಾಪ ಮುಂದೂಡಿಕೆ….

Promotion

ಮಧ್ಯಪ್ರದೇಶ,ಮಾ,16,2020(www.justkannada.in): ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆ ಬಳಿಕ ಅವರ ಆಪ್ತರಾದ  ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಇಂದು ವಿಶ್ವಾಸಮತಯಾಚನೆ ಮಾಡುವಂತೆ ಮಧ್ಯಪ್ರದೇಶ ಸಿಎಂ ಕಮಲನಾಥ್ ಗೆ ರಾಜ್ಯಪಾಲರು ನಿರ್ದೇಶಿಸಿದ್ದರು. ಆದರೆ ಇದೀಗ   ಸಿಎಂ ಕಮಲನಾಥ್ ಗೆ ತಾತ್ಕಾಲಿಕ ರಿಲೀಫ್  ಸಿಕ್ಕಂತಾಗಿದೆ.

ಹೌದು, ಕೊರೋನಾ ವೈರಸ್ ಭೀತಿ ಹಿನ್ನೆಲೆ ವಿಧಾನಸಭೆ ಕಲಾಪವನ್ನ ಸ್ಪೀಕರ್ ಮಾರ್ಚ್ 26ಕ್ಕೆ ಮುಂದೂಡಿದ್ದು ಶಾಸಕರ ರಾಜೀನಾಮೆಯಿಂದ ಪತನದ ಅಂಚಿನಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್​ ಸಿಕ್ಕಂತಾಗಿದೆ..

ಇನ್ನು ಬೆಂಗಳೂರಿನ ರೆಸಾರ್ಟ್ ವೊಂದರಲ್ಲಿ ತಂಗಿರುವ ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರಿಗೆ ರಾಜ್ಯಪಾಲರು ಶಾಕ್ ನೀಡಿದ್ದಾರೆ. ಎಲ್ಲಾ ಶಾಸಕರು ಸದನಕ್ಕೆ ಹಾಜರಾಗಲು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಧ್ಯಪ್ರದೇಶ ರಾಜಕೀಯ ಹೈಡ್ರಾಮಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

Key words: Temporary Relief – Madhya Pradesh- CM Kamalnath-Adjournment – assembly