ದೇವಾಲಯಗಳನ್ನ ಸರ್ಕಾರದ ಹಿಡಿತದಿಂದ ಭಕ್ತರ ಕೈಗೆ ನೀಡಬೇಕೆಂಬುದು ನಮ್ಮ ಆಲೋಚನೆ- ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ.

ಬೆಂಗಳೂರು,ಡಿಸೆಂಬರ್,31,2021(www.justkannada.in): ಬಿಜೆಪಿ ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಾಲಯಗಳನ್ನು ಹಸ್ತಾಂತರಿಸುವ ಅಜೇಂಡಾ ಎಂದು ಆರೋಪಿಸಿದ ಡಿಕೆ ಶಿವಕುಮಾರ್ ಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬ ಆಲೋಚನೆ ಇದೆ.  ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಭಕ್ತರು ಅಂದರೆ ಬಿಜೆಪಿ, ಆರ್ ಎಸ್‍ಎಸ್ ಕಾರ್ಯಕರ್ತರು ಆಗಿರಬಹುದು, ಡಿಕೆಶಿ ಶಿವಕುಮಾರ್ ಕೂಡ ಆಗಿರಬಹುದು. ದೇವಾಲಯಗಳಿಗೆ ಭಕ್ತರು ಅಂದರೆ ದೇವಾಲಯಗಳಿಗೆ ಎಲ್ಲರು ಬರುತ್ತಾರೆ.

ಹೀಗಾಗಿ ದೇವಸ್ಥಾನಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಿ ನಾವು ಭಕ್ತರಿಗೆ ಕೊಡಬೇಕೆಂದು ಆಲೋಚಿಸಿದ್ದೇವೆ. ಇನ್ನೂ ಮಾರ್ಗಸೂಚಿ ಸಿದ್ಧಪಡಿಸಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಹಿಂದೂ ದೇವಾಲಯಗಳನ್ನು ಯಾವುದೆ ಸಂಘ ಸಂಸ್ಥೆಗೆ ನೀಡುವುದಿಲ್ಲ ಎಂದು  ತಿಳಿಸಿದರು.

Key words: temples – handed over -devotees – government-Minister- Kota Srinivas Poojary.