ಆಸಿಸ್ ಮಣಿಸಿ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಟೀಂ ಇಂಡಿಯಾ

Promotion

ಬೆಂಗಳೂರು, ಜನವರಿ 20, 2021 (www.justkannada.in): ಐಸಿಸಿ ನೂತನ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲೂ ಆಸೀಸ್‌ಗೆ ಟೀಂ ಇಂಡಿಯಾ ಸೆಡ್ಡು ಹೊಡೆದಿದೆ.

ಟೀಮ್‌ ಇಂಡಿಯಾ ಎಂಆರ್‌ಎಫ್‌ ವರ್ಲ್ಡ್‌ ವೈಡ್‌ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿದೆ.
ಗಬ್ಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ ಕಳೆದ 32 ವರ್ಷಗಳಲ್ಲಿ ಸೋಲನ್ನೇ ಕಂಡಿರಲಿಲ್ಲ.

ಇದೀಗ ಸೋಲಿನ ರುಚಿ ತೋರಿಸಿರುವ ಟೀಂ ಇಂಡಿಯಾ ರ‍್ಯಾಂಕಿಂಗ್‌ ಪಟ್ಟಿಯಲ್ಲೂ ಮೇಲೇರಿದೆ.

ಈ ಜಯದೊಂದಿಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ತನ್ನ 2ನೇ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಈ ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಲು ಮತ್ತಷ್ಟು ಹತ್ತಿರವಾಗಿದೆ.