ನ್ಯೂಜಿಲ್ಯಾಂಡ್’ನಲ್ಲಿ ಟ್ರಕ್ಕಿಂಗ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರು

Promotion

ಆಕ್ಲೆಂಡ್, ಫೆಬ್ರವರಿ 14, 2020 (www.justkannada.in): ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಸೋಲು ಮರೆತು ಟೆಸ್ಟ್ ಸರಣಿಗೆ ಸಿದ್ಧರಾಗುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಟ್ರಕ್ಕಿಂಗ್ ಮಾಡಿ ರಿಲ್ಯಾಕ್ಸ್ ಮಾಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕೂಡಾ ಜತೆಯಾಗಿದ್ದಾರೆ. ಅನುಷ್ಕಾ, ವಿರಾಟ್ ಹಾಗೂ ಇತರ ಕ್ರಿಕೆಟಿಗರು ಟ್ರಕ್ಕಿಂಗ್ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಫೆಬ್ರವರಿ 21 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಅದಕ್ಕೂ ಮುನ್ನ ಸಿಕ್ಕು ಕಿರು ಅವಧಿಯ ಬಿಡುವಿನ ವೇಳೆಯನ್ನು ಕ್ರಿಕೆಟಿಗರು ಚೆನ್ನಾಗಿಯೇ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.