Saturday, September 19, 2026

BDA Apartments

ಬಂತು ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಕೋವಿಡ್ ಪರೀಕ್ಷೆ ರಿಪೋರ್ಟ್ BDA JK_Adv BDA Adv
Home Front Page ಬಂತು ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಕೋವಿಡ್ ಪರೀಕ್ಷೆ ರಿಪೋರ್ಟ್

ಬಂತು ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಕೋವಿಡ್ ಪರೀಕ್ಷೆ ರಿಪೋರ್ಟ್

ಮೆಲ್ಬರ್ನ್, ಜನವರಿ 04, 2020 (www.justkannada.in):  ಟೀಂ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳ ಕೋವಿಡ್ ಪರೀಕ್ಷೆ ನಡೆಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ.

ಮೆಲ್ಬರ್ನ್ ನಲ್ಲಿ ಭಾರತೀಯ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ನವದೀಪ್ ಸೈನಿ ಮತ್ತು ಪೃಥ್ವಿ ಶಾ ಹೋಟೆಲ್ ಗೆ ತೆರಳಿದ್ದರು.

ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು. ಈ ಘಟನೆಯಿಂದ ಭಾರತೀಯ ಆಟಗಾರರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಕಿಡಿಕಾರಿತ್ತು. ಇದೀಗ ಎಲ್ಲರ ಕೋವಿಡ್ ಪರೀಕ್ಷೆ ನಡೆಸಿದ್ದು, ನೆಗೆಟಿವ್ ಫಲಿತಾಂಶ ಬಂದಿದೆ.

ಕ್ವೀನ್ಸ್ ಲ್ಯಾಂಡ್ ಸರಕಾರವೂ ಕ್ವಾರಂಟೈನ್ ನಿಯಮ ಉಲ್ಲಂಘಿಸುವುದಾದರೆ ಬ್ರಿಸ್ಬೇನ್ ಗೆ ಟೆಸ್ಟ್ ಆಡಲು ಬರುವುದು ಬೇಡ ಎಂದು ಹೇಳಿತ್ತು.