ನಿವೃತ್ತಿ ಕುರಿತ ಮನದಾಳ ಬಿಚ್ಚಿಟ್ಟ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ..

Promotion

ಬೆಂಗಳೂರು, ಫೆಬ್ರವರಿ 20, 2020 (www.justkannada.in): 3 ವರ್ಷದ ಬಳಿಕ ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈ ಬಿಡುವ ಬಗ್ಗೆ ಯೋಚಿಸುವ ಸಾಧ್ಯತೆ ಇದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಹೆಚ್ಚುಕಮ್ಮಿ ಕಳೆದ 8 ವರ್ಷಗಳಿಂದ ಪ್ರಾಕ್ಟೀಸ್​ ಸೆಷನ್​ ಹಾಗೂ ಟ್ರಾವೆಲಿಂಗ್​ ಸೇರಿದಂತೆ ವರ್ಷಕ್ಕೆ 300 ದಿನ ಕ್ರಿಕೆಟ್​ನಲ್ಲಿ ಕಳೆಯುತ್ತಿದ್ದೇನೆ. ಎಲ್ಲಿಯೂ ನನ್ನ ಕ್ಷಮತೆ ಹಾಗೂ ಬದ್ಧತೆ ಈ ನಿಟ್ಟಿನಲ್ಲಿ ಕಡಿಮೆಯಾಗಿಲ್ಲ. ಆದರೆ ಹೀಗೆ ಇರುತ್ತದೆ ಎನ್ನುವುದಕ್ಕೂ ಆಗುವುದಿಲ್ಲ ಎಂದಿದ್ದಾರೆ ಕೊಹ್ಲಿ.

3 ಫಾರ್ಮೆಟ್​ನ ಆಟದಲ್ಲೂ ತಾವು ಫಿಟ್​ ಆಗಿದ್ದೇನೆ. ತಮಗೆ 34 ಅಥವಾ 35 ವರ್ಷವಾದಾಗ, ನನ್ನ ದೇಹ ನನ್ನ ಆಟಕ್ಕೆ ಸಹಕರಿಸುವುದಕ್ಕೆ ನಿರಾಕರಿಸಬಹುದು. ಆ ಸಂದರ್ಭದಲ್ಲಿ ನನ್ನ ಅಭಿಪ್ರಾಯ ಬೇರೆಯದ್ದೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.