ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶಿಕ್ಷಕರ ದಿನಾಚರಣೆ

Promotion

ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಶಿಕ್ಷಕರ ಪ್ರಕೊಷ್ಠದ ವತಿಯಿಂದ ಶಿಕ್ಷಕರ ದಿನಾಚರಣೆ ನಡೆಸಲಾಯಿತು.
ಶಿಕ್ಷಕರ ದಿನಾಚರಣೆ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಅಂಗವಾಗಿ ನಗರದ ಅನೇಕ ರಂಗಗಳಾದ ಕಲೆ,ಸಾಂಸ್ಕೃತಿಕ, ವೈದ್ಯರು,ಕ್ರೀಡೆ,ಯೋಗ,ರಾಜಕೀಯ ದಲ್ಲಿ ಸೇವೆಸಲ್ಲಿಸಿದ ಶಿಕ್ಷಕರನ್ನು ಗೌರವಿಸಲಾಯಿತು.

ಪ್ರಾಸ್ಥವಿಕವಾಗಿ ಮಾತನಾಡಿದ ಡಾ.ಎಲ್.ಶಿವರಾಜಪ್ಪ, ಗುರುಗಳು ಎಂದು ನೆನಪಿಗೆ ಬರುವುದು ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ,ಹಾಗೂ ಅಟಲ್ ಬಿಹಾರಿ ವಾಜಪೇಯಿ ಇವರುಗಳ ಆದರ್ಶ ನಮ್ಮೇಲ್ಲರ ಪ್ರೇರಣೆಯಾಗಲಿ, ನಮ್ಮಗೆಲ್ಲ ನಿಜವಾದ ಶಿಕ್ಷಣ ಆತಂಕದಿಂದ ದೂರವಾಗುವುದು ಎಂದರ್ಥ,ಶಿಕ್ಷಣಕ್ಕೆ ಯಾವುದೇ ಜಾತಿ,ಧರ್ಮವಿಲ್ಲ, ಇದರಲ್ಲಿ ಇರುವುದು ಮಹಿಳೆ ಮತ್ತು ಪುರುಷ ಅಷ್ಟೇ,ಶಿಕ್ಷಣ ಕೇವಲ ವ್ಯಾಪಾರ,ಪ್ರಶಸ್ತಿಗಾಗಿ ಇರಬಾರದು ಶಿಕ್ಷಣ ಅಂದರೆ ಬದುಕನ್ನು ಕಟ್ಟಿಕೊಳುವ ಶಿಕ್ಷಣ ವಾಗಬೇಕು ಹಾಗೇಯೆ ವ್ಯಕ್ತಿ ಮತ್ತು ವ್ಯಕ್ತಿತ್ವದ ನಿರ್ಮಾಣವಾಗಲಿ ಎಂದರು.

ನಗರ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ,ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್, ಶಿಕ್ಷಕರ ಪ್ರಕೊಷ್ಟದ ಸಂಚಾಲಕ ಬಸವರಾಜಪ್ಪ,ರಾಜ್ಯ ಸದಸ್ಯರಾದ ಡಾ.ನಿರಂಜನ ಕುಮಾರ್,ಗಾಂಧಿ ಭವನ ನಿರ್ದೇಶಕರಾದ ಡಾ.ಶಿವರಾಜಪ್ಪ ,ಸಹ ಸಂಚಾಲಕ ವಾಸುದೇವ ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ.ರಾಜೀವ್,ನಗರ ಪಾಲಿಕೆ ಸದಸ್ಯರಾದ ವೇದಾವತಿ,ರೂಪ ಬಾಬಣ್ಣ,ಎಸ್ ಎನ್ ಶಿವಪ್ರಕಾಶ್, ಜಯ ಪ್ರಕಾಶ್, ಆಶಾ ನಾಗಭೂಷಣ,ವಾಣೀಶ್ ಕುಮಾರ್, ಜಯರಾಮ್, ಜೋಗಿಮಂಜು, ಚೇತನ್, ಸೋಮಶೇಖರ್, ಪೂರ್ಣಿಮಾ ಚಂದ್ರಪ್ಪ,ಸಂತೋಷ್, ರಾಜೇಂದ್ರ,ಇದ್ದರು.

ಸನ್ಮಾನಿತರು…
ಶ್ರೀ ಕೆ.ಎಂ‌ಮಹದೇವಯ್ಯ
ಡಾ ಗಜಾನನ ಹೆಗಡೆ
ಡಾ.ದಯಾನಂದ
ಶ್ರೀ ಸತ್ಯ ಪ್ರಸಾದ್
ಶ್ರೀ ಕಾಂತರಾಜು
ಶ್ರೀ ಹೇಮಣ್ಣ
ಡಾ.ಶಿವರಾಜಪ
ಶ್ರೀ ಡಿ.ಕೆ.ಶಿನಿವಾಸ್
ಯೋಗ ಸಂಪತ್ ಅಚಾರ್
ಶ್ರೀ ಟಿ.ಮಲ್ಲಪ್ಪ
ಶ್ರೀ ಎಲ್.ಶ್ರೀಕಂಠ
ಶ್ರೀ ಅರ್.ಸತ್ಯ ನಾರಯಣ
ಶ್ರೀ ಹೆಚ್.ಎಲ್.ಶಿವಶಂಕರ್ ಸ್ವಾಮಿ
ಶ್ರೀ ಶಿವರಾಮಯ್ಯ