‘ಕುರುಕ್ಷೇತ್ರ’ಕ್ಕೆ ತೆರಿಗೆ ವಿನಾಯಿತಿ ನೀಡಿ: ಸಿಎಂಗೆ ಮುನಿರತ್ನ ಮನವಿ

Promotion

ಬೆಂಗಳೂರು, ಆಗಸ್ಟ್20, 2019 (www.justkannada.in): ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾಗೆ ಹಿರಿಯ ಕಲಾವಿದರು ಸೇರಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಚಿತ್ರದ ನಿರ್ಮಾಪಕ ಮುನಿರತ್ನ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಿದ್ದಾರಂತೆ. ಮಹಾಭಾರತ ಕಥೆ ಆಧರಿಸಿ ಸಿನಿಮಾ ಸಿದ್ಧಗೊಂಡಿದೆ. ಹೀಗಾಗಿ ಚಿತ್ರಕ್ಕೆ ಸಂಪುರ್ಣ ತೆರಿಗೆ ವಿನಾಯಿತಿ ನೀಡಿ ಎಂದು ಕೋರಲಿದ್ದಾರೆ.

ಕುರುಕ್ಷೇತ್ರ ಮಹಾ ಕಾವ್ಯ ಮಹಾಭಾರತದ ಕ್ಲೈಮ್ಯಾಕ್ಸ್​. ಹೀಗಾಗಿ, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಈ ಸಿನಿಮಾ ವೀಕ್ಷಿಸಬೇಕು. ಹೀಗಾಗಿ ತೆರಿಗೆ ವಿನಾಯಿತಿ ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಿದ್ದಾರಂತೆ.