ಗ್ರಾಮಮಟ್ಟದಲ್ಲಿ ಟಾಸ್ಕ್ ಫೋರ್ಸ್ ಈಗಲೂ ಮುಂದುವರಿಕೆ- ಸಚಿವ ಕೆ.ಎಸ್ ಈಶ್ವರಪ್ಪ…

Promotion

ಬೆಂಗಳೂರು,ಏಪ್ರಿಲ್,19,2021(www.justkannada.in): ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದೆವು. ಈಗಲೂ ಅದನ್ನ ಮುಂದುವರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕೋವಿಡ್ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದೆವು ಹಿಂದೆ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈಗಲೂ ಅದನ್ನ ಮುಂದುವರಿಸುತ್ತೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆರೂವರೆ ಲಕ್ಷ ವ್ಯಾಕ್ಸಿನ್ ಹಾಕಲಾಗಿದೆ. ಕೇವಲ 2 ಸಾವಿರ ಗ್ರಾ.ಪಂಗಳಲ್ಲಿ ಹಾಕಲಾಗಿದೆ. ಎಲ್ಲಾ ಪಂಚಾಯ್ತಿ ಸೇರಿದರೆ 15 ಲಕ್ಷ ವ್ಯಾಕ್ಸಿನ್ ಹಾಕಬಹುದು ಎಂದರು.Task Force -village level - still continuing-Minister- KS Eshwarappa.

ಕೆರೆ,ಕಟ್ಟೆಗಳ, ನಾಲೆ, ಕಲ್ಯಾಣಿ, ಗೋಕಟ್ಟೆ ಅಭಿವೃದ್ಧಿಗೆ ನಿರ್ಧಾರ ಮಾಡಲಾಗಿದೆ.ನರೇಗಾದಡಿ ಈ ಕಾರ್ಯಕ್ರಮ ನಡೆಸುತ್ತೇವೆ. ಮಳೆ ನೀರನ್ನ ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡ್ತೇವೆ. ಇದರ ಬಗ್ಗೆ ಟಾರ್ಗೆಟ್ ಕೂಡ ಕೊಟ್ಟಿದ್ದೇವೆ. ಕೆರೆ ಅಭಿವೃದ್ಧಿಯನ್ನ ಗ್ರಾಮಪಂಚಾಯ್ತಿಗೆ ಕೊಡ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

Key words: Task Force -village level – still continuing-Minister- KS Eshwarappa.