ತಮಿಳುನಾಡಿನಲ್ಲಿ ಥಿಯೇಟರ್ ಓಪನ್’ಗೆ ಕೂಡಿ ಬಂತು ಕಾಲ ! ಕರ್ನಾಟಕದಲ್ಲಿ ಯಾವಾಗ?

Promotion

ಬೆಂಗಳೂರು, ಜನವರಿ 05, 2020 (www.justkannada.in):

ತಮಿಳುನಾಡಿನಲ್ಲಿ ಚಿತ್ರಮಂದಿರಗಳು ತೆರೆಯುವ ಕಾಲ ಸಮೀಪಿಸಿದೆ.

ಹೌದು. ತಮಿಳುನಾಡು ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100 ವೀಕ್ಷಕರಿಗೆ ಏಕಕಾಲಕ್ಕೆ ಚಿತ್ರ ವೀಕ್ಷಣೆಗೆ ಅವಕಾಶ ಒದಗಿಸಲು ಒಪ್ಪಿಗೆ ನೀಡಿದೆ.

ಶೇ. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದರಿಂದ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿರಲಿಲ್ಲ. ಇದೀಗ ತಮಿಳುನಾಡು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.

ಕರ್ನಾಟಕದಲ್ಲೂ ಚಿತ್ರಮಂದಿರದಲ್ಲಿ ಎಲ್ಲಾ ಸೀಟುಗಳನ್ನೂ ಭರ್ತಿ ಮಾಡಲು ಅವಕಾಶ ಕೊಟ್ಟರೆ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲು ಕಾದಿವೆ.